ಚಿರತೆ ಸೆರೆಗೆ ಬೋನ್ ಅಳವಡಿಸಲು ಅರಣ್ಯಾದಿಕಾರಿಗಳಿಗೆ ರೈತರ ಒತ್ತಾಯ.
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಹಸುವನ್ನು ಬಲಿ ಪಡೆದಿದೆ ಮುನೇಗೌಡ ಎಂಬುವವರ ತೋಟದ ಶೆಡ್ ಗೆ ನುಗ್ಗಿರುವ ಚಿರತೆ ಹಸುವನ್ನು ಕೊಂದು ಹಾಕಿದೆ.ಸುಮಾರು50 ಸಾವಿರ ರುಪಾಯಿ ಬೆಲೆ ಬಾಳುವ ಹಸುವನ್ನು ಚಿರತೆ ಕೊಂದು ತಿಂದು ಹಾಕಿದ್ದು ರೈತ ಮುನೇಗೌಡ ಅತಂತ್ರರಾಗಿದ್ದಾರೆ.
ನಂದಿ ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು ಚಿರತೆ ಸೆರೆಗೆ ಬೋನ್ ಅಳವಡಿಸಲು ರೈತರು ಸ್ಥಳೀಯರು ಒತ್ತಾಹಿಸಿದ್ದಾರೆ.