ಮದ್ಯ ರಾತ್ರಿಯಲ್ಲಿ ಅಜ್ಜಿಯ ನಿಗೂಢ ಓಡಾಟ..

ದೊಡ್ಡಬಳ್ಳಾಪುರ : ನಗರದ ಸೋಮೇಶ್ವರ ಬಡವಾಣೆಯಲ್ಲಿ ಕಳೆದೊಂದು ವಾರದಿಂದ ಮಧ್ಯರಾತ್ರಿಯ ಸಮಯದಲ್ಲಿ ನಿಗೂಢವಾಗಿ ಅಜ್ಜಿ ಪ್ರತ್ಯಕ್ಷವಾಗುತ್ತಾಳೆ, ಮನೆಗಳ ಮುಂದೆ ಓಡಾಡುವ ಅಜ್ಜಿ ಯಾವುದೋ ಒಂದು ವಸ್ತುವನ್ನ ಚೆಲ್ಲುತ್ತಿರುತ್ತಾಳೆ, ಸಿಸಿ ಕ್ಯಾಮಾರದಲ್ಲಿ ಅಜ್ಜಿಯ ದೃಶ್ಯ ಸೆರೆಯಾಗಿದ್ದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡವಾಣೆಯ ಚೇತನ್ ಸ್ಕೂಲ್ ಮುಂಭಾಗದಲ್ಲಿ ಅಚ್ಚರಿಯ ಘಟನೆ ಕಳೆದೊಂದು ನಡೆಯುತ್ತಿದೆ, ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಮನೆಗಳ ಮುಂದೆ ಓಡಾಡುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ, ಕಳ್ಳಕಾಕರ ಇರಬಹುದೆಂದ್ದು ಸಿಸಿ ಕ್ಯಾಮಾರಗಳನ್ನ ಪರಿಶೀಲನೆ ಮಾಡಿದ್ದಾಗ ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಅಜ್ಜಿ ಓಡಾಡುತ್ತಿರುವುದು ಸೆರೆಯಾಗಿದೆ.

ಸುತ್ತಮುತ್ತಲಿನ ಮನೆಗಳಲ್ಲಿ ಪರಿಶೀಲನೆ ಮಾಡಿದ್ದಾಗ ಈ ರೀತಿ ಓಡಾಡುವ ಅಜ್ಜಿ ಇಲ್ಲತ್ತಿರುವುದು ಗೊತ್ತಾಗಿದೆ, ಮಧ್ಯರಾತ್ರಿ ಬರುವ ಈ ಅಜ್ಜಿ ಯಾರು, ಮನೆಗಳ ಮುಂದೆ ಕವರ್ ನಿಂದು ತೆಗೆದು ಚೆಲ್ಲುತ್ತಿದ್ದಾಳೆ ಎಂಬುದು ಸ್ಥಳೀಯರ ಪಾಲಿಗೆ ನಿಗೂಢವಾಗಿದೆ, ಅಜ್ಜಿಯನ್ನ ಹಿಡಿಯಲು ಇಡೀ ರಾತ್ರಿ ಕಾದಿದ್ದಾರೆ, ಆದರೆ ಅಜ್ಜಿ ಮಾತ್ರ ಇನ್ನೂ ಪತ್ತೆಯಾಗಿಲ್ಲ, ಸದ್ಯಕ್ಕೆ ಸೋಮೇಶ್ವರ ಬಡವಾಣೆಯ ನಿವಾಸಿಗಳ ಅಜ್ಜಿಯ ಆತಂಕ ಪ್ರಾರಂಭವಾಗಿದೆ.

ನಿಗೂಢವಾಗಿ ಕಾಣಿಸಿಕೊಳ್ಳುವ ಅಜ್ಜಿ ಮಂಟಮಂತ್ರ ಮಾಡಿ ಜನರನ್ನ ಹೆದರಿಸಲು ಈ ರೀತಿ ಮಾಡುತ್ತಿರುವ ಸಂಶಯ ಸ್ಥಳೀಯರಿಗೆ ಇದೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಕಳ್ಳತನ ಘಟನೆಗಳು ಸಹ ನಡೆದಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹಾಕುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.