ವೈಜ್ಞಾನಿಕ ಬೆಲೆ ಸಿಗುವವರೆಗೂ ನಡೆಯುವ ಹೋರಾಟಕ್ಕೆ ನಿರಂತರ ಬೆಂಬಲ…… ಹರೀಶ್ ಗೌಡ
ದೊಡ್ಡಬಳ್ಳಾಪುರ:ಕೆ.ಐ.ಎ.ಡಿ.ಬಿ ಸಂಸ್ಥೆಯಿಂದ ಕೋಡಿಹಳ್ಳಿ, ಕೊನಘಟ್ಟ, ನಾಗದೇನಹಳ್ಳಿ ಆದಿನಾರಾಯಣ ಹೊಸಹಳ್ಳಿ ರೈತರಿಗೆ ವೈಜ್ಞಾನಿಕ ದರ ಸಿಗುವವರೆಗೂ ಯಾವುದೇ ಕಾರಣಕ್ಕೂ ರೈತರ ಹೋರಾಟ ನಿಲ್ಲುವುದಿಲ್ಲ. ಈ ಬಗ್ಗೆ ನಾವು ರೈತರ ಹೋರಾಟಕ್ಕೆ ನಿರಂತರ ಬೆಂಬಲ ನೀಡುತ್ತೇವೆ ಎಂದು ಜ್ಯಾತ್ಯಾತೀತ ಜನತಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿಹರೀಶ್ ಗೌಡ ಹೇಳಿದ್ದಾರೆ.
ಕೆ. ಐ. ಎ. ಡಿ. ಬಿ. ವಿರುದ್ಧ ಕೋಡಿಹಳ್ಳಿ, ಕೊನಘಟ್ಟ,ನಾಗ ದೇನಳ್ಳಿ ಆದಿನಾರಾಯಣ ಹೊಸಹಳ್ಳಿ ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟದ ಸಂಬಂಧ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಗೌಡರು, ಕಳೆದ ಬಾರಿ ಸಂಸ್ಥೆಯ ಅಧಿಕಾರಿಗಳನ್ನು ರೈತರು ಮನವಿ ಸಲ್ಲಿಸಿದಾಗ ಸೂಕ್ತ ಬೆಲೆ ನೀಡುವ ಬಗ್ಗೆ ಸಂಬಂದ ಪಟ್ಟ ಸಚಿವರ ಜೊತೆ ಚರ್ಚಿಸಿ ಹೊಸ ಧರ ನಿಗದಿ ಪಡಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು. ಆದರೆ ತಿಂಗಳುಗಳು ಕಳೆದರು ಕೆ. ಐ. ಎ. ಡಿ. ಬಿ ಅಧಿಕಾರಿಗಳಿಂದ ಇದರ ಬಗ್ಗೆ ಚಕಾರವಿಲ್ಲ. ಹಾಗಾಗಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಧರಣಿ 18ನೇ ದಿನಕ್ಕೆ ಕಾಲಿಟ್ಟಿದ್ದು ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆ ರೈತರ ನಿಯೋಗ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ರವರನ್ನು ಬೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕುಮಾರಣ್ಣ ನವರು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳ ಹಾಗೂ ಇಲಾಖೆ ಸಚಿವರಿಗೆ ಫೋನ್ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದಾರೆ. ಇದಾಗದಿದ್ದರೆ ಮುಂಬರುವ ಬಜೆಟ್ ಅಧಿವೇಶನದ ವೇಳೆ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ ನಿಗದಿ ಪಡಿಸಿರುವ ದರ ಅನುಕ್ರಮವಾಗಿ ತರೀ, ಖುಷ್ಕಿ ಜಮೀನಿಗೆ ನಿಯಮಗಳ ಪ್ರಕಾರ ಕ್ರಮವಾಗಿ ಎಕರೆಗೆ 80ಲಕ್ಷ, ದಿಂದ 1.25ಕೋಟಿ ನಿಗದಿ ಪಡಿಸಲಾಗಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಸರ್ಕಾರಿ ನಿಯಮದಂತೆ ವಶ ಪಡಿಸಿ ಕೊಳ್ಳುವ ಭೂಮಿಗೆ 4.8 ರಷ್ಟು ಹೆಚ್ಚುವರಿ ಹಣ ರೈತರಿಗೆ ಕೊಡಬೇಕು. ಆದರೆ ಭ್ರಷ್ಟ ಅಧಿಕಾರಿಗಳು ಮೊದಲಿನ ಬೆಲೆಗೆ ರೈತರ ಜಮೀನನ್ನು ಕಬಳಿಸ ಹೊರಟಿರುವುದು ಅಕ್ಷಮ್ಯ.ಈ ಬಗ್ಗೆ ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿ ನ್ಯಾಯ ದೊರಕಿಸಿ ಕೊಡಬೇಕಿದೆ. ಪಕ್ಕದ ತಾಲೂಕಿನಲ್ಲಿ ನಿಗದಿ ಪಡಿಸಿರುವ ದರದಂತೆ ರೈತರಿಗೆ ಸೂಕ್ತ ದರ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಡೆಯವ ಹೋರಾಟಗಳಿಗೆ ನಾವು ಸಂಪೂರ್ಣ ಬೆಂಬಲವಾಗಿ ರೈತರ ಪರ ನಿಲ್ಲುತ್ತೆವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹರೀಶ್ ಗೌಡರು ಹೇಳಿದರು.
ನಾಗದೇನಳ್ಳಿ ಆನಂದ್ ಮಾತನಾಡಿ ನಮ್ಮ ಭೂಮಿಗೆ ಸರಿಯಾದ ದರ ಸಿಗುತ್ತಿಲ್ಲ. ಕೆ. ಐ. ಎ. ಡಿ. ಬಿ ಅಧಿಕಾರಿಗಳು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಸರಿಯಾದ ಬೆಲೆ ಸಿಗದಿದ್ದರೆ ನಾವು ಭೂಮಿಯನ್ನು ಕೊಡುವುದಿಲ್ಲ. ನಾಲ್ಕೈದು ಕೋಟಿ ಬಾಳುವ ಭೂಮಿಯನ್ನು ಕೇವಲ ಎಂಬತ್ತು ಲಕ್ಷಕ್ಕೆ ಕೊಡಲು ಹೇಗೆಸಾಧ್ಯ. ಇಲ್ಲಿ ತುಂಡು ಭೂಮಿ ಹೊಂದಿರುವ ರೈತರೇ ಹೆಚ್ಚಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಾಗುವ ಪರಿಣಾಮಗಳಿಗೆ ಅಧಿಕಾರಿಗಳು ಹಾಗೂ ಸರ್ಕಾರವೇ ಹೊಣೆಯಾಗುತ್ತದೆ. ಯಾವುದೇ ಕಾರಣಕ್ಕೂ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆನಂದ್ ಹೇಳಿದ್ದಾರೆ.
ಟಿ. ಎ. ಪಿ. ಎಂ ಸಿ. ಎಸ್ ನಿರ್ದೇಶಕ ಆನಂದ್ ಮಾತನಾಡಿ ಭೂ ಸ್ವಾದೀನ ನಿಯಮದ ಪ್ರಕಾರ ಭೂಮಿ ಕಳೆದು ಕೊಳ್ಳುವ ರೈತರಿಗೆ ಮೂರ್ನಾಲ್ಕು ಪಟ್ಟು ಹೆಚ್ಚಿಗೆ ಪರಿಹಾರ ಕೊಡಬೇಕಿದೆ. ಇದು ಸಾಧ್ಯವಾಗದಿದ್ದರೆ ನಾವು ಕೆ. ಐ. ಎ. ಡಿ. ಬಿ ಗೆ ಭೂಮಿ ಕೊಡುವ ಪ್ರಶ್ನೆಯೇ ಇಲ್ಲಾ. ಈಗಾಗಲೇ ಕೃಷಿ ನಂಬಿ ಬದುಕು ಕಟ್ಟಿಕೊಂಡಿರುವ ಸಾಕಷ್ಟು ರೈತರಿದ್ದಾರೆ. ಸರಿಯಾದ ಬೆಲೆ ಸಿಗದಿದ್ದರೆ ರೈತರು ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತದೆ. ಯಾವುದೇ ಕಾರಣಕ್ಕೂ ವೈಜ್ಞಾನಿಕ ಬೆಲೆ ಸಿಗದಿದ್ದರೆ ರೈತರು ಭೂಮಿ ಕೊಡುವ ಸಾಧ್ಯತೆಗಲಿಲ್ಲ. ಈ ಬಗ್ಗೆ ರೈತರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಲವಾರು ಸಭೆಗಳು ನಡೆದಿವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಇದರಲ್ಲಿ ಅಧಿಕಾರಿಗಳ ಕೈವಾಡ ಎದ್ದು ಕಾಣುತ್ತಿದೆ. ಒಂದರ್ಥದಲ್ಲಿ ಅಧಿಕಾರಿಗಳೇ ಕಮಿಷನ್ ಆಸೆಗೋಸ್ಕರ ರೈತರನ್ನು ಒಕ್ಕಲಎಬ್ಬಿಸುವ ಕೆಲಸ ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಇದಕ್ಕೆ ನಾವು ತಕ್ಕ ರೀತಿಯಲ್ಲಿ ಉತ್ತರ ಕೊಡುತ್ತೇವೆ ಎಂದು ಆನಂದ್ ಹೇಳಿದರು.
ಸುದ್ದಿಘೋಷ್ಟಿಯಲ್ಲಿ ನಾಲ್ಕು ಗ್ರಾಮದ ರೈತರು ಬಾಗವಹಿಸಿದ್ದರು.