ಬಿ. ಜೆ. ಪಿ. ಯ ಪ್ರತಿಭಟನೆ ಸಂಪೂರ್ಣ ರಾಜಕೀಯ ಪ್ರೇರಿತವಾದುದು…. ಅಶೋಕ್
ದೊಡ್ಡಬಳ್ಳಾಪುರ: ಬಿ.ಜೆ.ಪಿ ಯವರ ಪ್ರತಿಭಟನೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ.ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ವಿಚಾರದಲ್ಲಿ ಮಾಡಿರುವ ಬಿ.ಜೆ.ಪಿ ಆರೋಪ ನಿರಾದಾರವಾದುದು.ಕುಣಿಯಲಾರದವ ನೆಲ ಡೊಂಕು ಎಂಬ ಹಿರಿಯರ ನಾಣ್ನುಡಿ ನೆನಪಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ,ಕಂಟನಕುಂಟೆ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಅಶೋಕ್ ಲೇವಡಿ ಮಾಡಿದ್ದಾರೆ.
ಇತ್ತೀಚಿಗೆ ದೊಡ್ಡಬಳ್ಳಾಪುರದಲ್ಲಿ ಬಿ.ಜೆ.ಪಿ ನೆಡೆಸಿದ ಪ್ರತಿಭಟನೆ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅಶೋಕ್ ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಯಾಗಿ ಮೇಲದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.2019ರ ಬಿ. ಜೆ. ಪಿ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ನಿರ್ಣಯವನ್ನು ಕೈಗೊಳ್ಳದೆ ಮುಂದೂಡಿದ್ದು ಬಹುಷಃ ಬಿ. ಜೆ. ಪಿ ನಾಯಕರಿಗೆ ನೆನಪಿಲ್ಲವೆಂದು ಕಾಣುತ್ತದೆ. ಕಳೆದ ಬಾರಿ ಶಾಸಕರಾ ಗಿದ್ದ ಅಪಕಾರನಹಳ್ಳಿ ವೆಂಕಟರಮಣಯ್ಯನವರು ಸದನದಲ್ಲಿ ಈ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸಿದರೂ ಕೂಡಾ ಬಿ. ಜೆ. ಪಿ ಸರ್ಕಾರ ರಾಜಕೀಯ ಕಾರಣಗಳಿಗೋಸ್ಕರ ಸತತ ಮೂರೂ ವರ್ಷಗಳ ಕಾಲ ಮುಂದೂಡಿ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದು ಬಿ ಜೆ ಪಿ ಯವರಿಗೆ ಅರಿವಿಲ್ಲವೇ ಎಂದ ಅಶೋಕ್ ಮಾಜಿ ಶಾಸಕರು ಕಳೆದ ಅವಧಿಯಲ್ಲಿ ಕ್ಷೇತ್ರದ ಹಲವಾರು ಅಭಿವೃದ್ಧಿ ಪ್ರಸ್ತಾವಣೆಯನ್ನು ಸರ್ಕಾರದ ಮುಂದಿಟ್ಟಾಗ ಅದಕ್ಕೆ ಅಡ್ಡಗಾಲು ಹಾಕಿದ್ದು ಯಾರೆಂಬುದನ್ನು ಬಿ. ಜೆ. ಪಿ. ನಾಯಕರು ಮನನ ಮಾಡಿಕೊಳ್ಳಲಿ. ಅದುಬಿಟ್ಟು ಈಗ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲವೆಂದು ಕೆರಳಿರುವ ತಾಲೂಕಿನ ಜನತೆಗೆ ಸುಳ್ಳು ಹೇಳಲು ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ಎಂಬ ಬೀದಿ ನಾಟಕ ಮಾಡಲಾಗಿದೆ.
ಕ್ಷೇತ್ರದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಹೋರಾಟ ಮಾಡಬೇಕಿರುವುದು ಸದನದಲ್ಲಿಯೇ ಹೊರತು, ದೊಡ್ಡಬಳ್ಳಾಪುರ ದಲ್ಲಿ ಬಂದು ನಾಟಕ ಮಾಡುವುದು ಬಿ. ಜೆ. ಪಿ. ಯವರಿಗೆ ಶೋಭೆ ತರುವುದಿಲ್ಲ. ಜಿಲ್ಲಾ ಮಟ್ಟದ ಪ್ರತಿಭಟನೆಗೆ ಐದು ಸಾವಿರ ಜನ ಸೇರುತ್ತಾರೆಂದು ಹೇಳಿಕೊಂಡಿದ್ದ ಬಿ. ಜೆ. ಪಿ ನಾಯಕರಿಗೆ ಜಿಲ್ಲೆಯ ಜನ ಯಾವ ಮರ್ಯಾದೆ ಕೊಟ್ಟಿದ್ದಾರೆಂದು ಅರ್ಥವಾಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿರೋಧ ಪಕ್ಷದ ನಾಯಕರಿಗೆ ಪ್ರತಿಭಟನೆ ಏತಕ್ಕಾಗಿ ನಡೆಯುತ್ತಿದೆ ಎಂಬುದೇ ಗೊತ್ತಿಲ್ಲದೆ ಬರ ಪರಿಹಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಕೇಂದ್ರದಿಂದ ಬರಪರಿಹಾರಕ್ಕೆ ಹಣ ಬಂದಿಲ್ಲದ ಬಗ್ಗೆ ಮಾತನಾಡುವ ದಮ್ಮು, ತಾಕತ್ತು ಬಿ. ಜೆ. ಪಿ ಮುಖಂಡರಿಗಿಲ್ಲ. ಅಭಿವೃದ್ಧಿಯ ನಿಜವಾದ ಕಾಳಜಿ ಇದ್ದರೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುದಾನ ತರಬೇಕು. ಅದುಬಿಟ್ಟು ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ದೊಡ್ಡಬಳ್ಳಾಪುರ ಕ್ಕೆ ಬಂದು ನಾಟಕವಾಡುವ ಅಗತ್ಯವಿಲ್ಲ ಎಂದು ಅಶೋಕ್ ಹೇಳಿದ್ದಾರೆ.