ಸರ್ಕಾರದ ಜನವಿರೋದಿ ನೀತಿ ಖಂಡಿಸಿ ಬಿ.ಜೆ.ಪಿ ಪ್ರತಿಭಟನೆ.
ದೊಡ್ಡಬಳ್ಳಾಪುರ: ಕಾಂಗ್ರೆಸ್ ಸರ್ಕಾರದ ಜನವಿರೋದಿ ನೀತಿಗಳಿಂದಾಗಿ ರಾಜ್ಯದ ಜನ ಬೇಸತ್ತಿದ್ದಾರೆ.ಬಿಟ್ಟಿ ಬಾಗ್ಯಗಳ ಮೂಲಕ ಸರ್ಕಾರ ಜನರನ್ನು ವಂಚಿಸಿದ್ದು,ಇದಕ್ಕಾಗಿ ಸರ್ಕಾರದ ವಿರುದ್ಧ ಜನವರಿ 30 ರಂದು ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಹಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿ.ಜೆ.ಪಿ ಅದ್ಯಕ್ಷ ರಾಮಕೃಷ್ಣ ಪ್ಪ ಹೇಳಿದರು.
ನಗರದ ಜಿಲ್ಲಾ ಬಿ.ಜೆ.ಪಿ ಕಾರ್ಯಾಲಯದಲ್ಲಿ ನೆಡೆದ ಸುದ್ದಿಘೋಷ್ಟಿಯಲ್ಲಿ ರಾಮಕೃಷ್ಣಪ್ಪ ಮಾತನಾಡಿ ದೊಡ್ಡಬಳ್ಳಾಪುರದಲ್ಲಿ ಕಳೆದ ಬಿ.ಜೆ.ಪಿ ಸರ್ಕಾರದ ಅವದಿಯಲ್ಲಿ ಮಂಜೂರಸಗಿದ್ದ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕ್ಕೆ ಸಿದ್ದರಾಮಯ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಲ್ಲ.ಅದನ್ನು ಬೇರೆಡೆಗೆ ವರ್ಗಾಯಿಸುವ ಬಗ್ಗೆ ಊಹಾ ಪೋಹಗಳು ಹರಿದಾಡುತ್ತಿವೆ.ಇದನ್ನು ಬಿ.ಜೆ.ಪಿ ಕಡಾಖಂಡಿತವಾಗಿ ವಿರೋಧಿಸುತ್ತದೆ.ಹತ್ತು ಸಾವಿರ ಕೋಟಿಗಳನ್ನು ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಅನುದಾನ ಘೋಷಣೆ ಮಾಡಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ.ಎಸ್ .ಸಿ .ಎಸ್ .ಟಿ ಅಬಿವೃದ್ದಿಗೆ ಮೀಸಲಿಟ್ಟಿದ್ದ ಸುಮಾರು 11ಕೋಟಿ ಹಣವನ್ನು ಬೇರೆ ಕೆಲಸಗಳಿಗೆ ನೀಡಲಾಗಿದೆ.ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ ಧರ್ಮ ಧರ್ಮಗಳ ಮದ್ಯೆ ಬಿರುಕು ಮೂಡಿಸಿ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.ಬಾಗ್ಯಗಳ ಹೆಸರಿನಲ್ಲಿ ಸರ್ಕಾರ ಜನರ ತೆರಿಗೆ ದುಡ್ಡನ್ನು ಲೂಟಿ ಮಾಡುತ್ತಿದೆ.ಸಿದ್ದರಾಮಯ್ಯ ಸರ್ಕಾರವೆಂದರೆ ತುಘಲಕ್ ಸರ್ಕಾರ ಎಂಬಂತಾಗಿದೆ.ಇದನ್ನು ಖಂಡಿಸಿ ಜನವರಿ 30 ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ,ವಿರೋಧ ಪಕ್ಷದ ನಾಯಕ ಆರ್ ಅಶೋಕ್,ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಮಕೃಷ್ಣಪ್ಪ ಹೇಳಿದರು.
ಜಿಲ್ಲಾ ಬಿ.ಜೆ.ಪಿ.ವಕ್ತಾರರಾದ ಪುಷ್ಪ ಶಿವಶಂಕರ್ ಮಾತನಾಡಿ ತಾಲೂಕಿನಲ್ಲಿ ಹಲವು ಸಮಸ್ಯೆ ಗಳಿದ್ದು ಅದರಲ್ಲಿ ಪ್ರಮುಖವಾಗಿ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ನಿರ್ಮಾಣದ ಬಗ್ಗೆ ಮಾಜಿ ಶಾಸಕರು ಗಮನ ಹರಿಸದೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ.ಈಗ ಕಾಂಗ್ರೆಸ್ ಸರ್ಕಾರ ಅನುದಾನ ಕೊಟ್ಟಿಲ್ಲ.ಗ್ಯಾರಂಟಿ ಯೋಜನೆಗಳ್ನು ಪೂರೈಸುವಲ್ಲಿ ಸರ್ಕಾರ ಸೋತಿದೆ.ಪ್ರಸ್ತುತ ತಾಲ್ಲೂಕಿನಲ್ಲಿ 100 ಹಾಸಿಗೆಗಳ ಹಾಸಿಗೆ ಇದ್ದು ತಿಂಗಳಿಗೆ ಸುಮಾರು ಹತ್ತು ಸಾವಿರ ರೋಗಿಗಳು ಉಪಯೋಗ ಪಡೆಯುತ್ತಿದ್ದಾರೆ.ನೂರಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ ನೆಡೆದಿದೆ.ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಸರ್ಕಾರದಿಂದ ಯಾವುದೇ ಚಕಾರವಿಲ್ಲ.ಒಟ್ಟಾರೆ ಕಾಂಗ್ರೆಸ್ ಸರ್ಕಾರ ಜನವಿರೋದಿ ಸರ್ಕಾರವಾಗಿದೆ.ಸರ್ಕಾರದ ಈ ನೀತಿಯನ್ನು ಖಂಡಿಸುವ ಸಲುವಾಗಿ ರಾಜ್ಯ ಬಿ.ಜೆ.ಪಿ ನಾಯಕರ ನೇತೃತ್ವದಲ್ಲಿ ಜನವರಿ30 ರಂದು ಬೃಹತ್ ಪ್ರತಿಭಟನೆ ನೆಡೆಸಲಾಗುವುದು ಎಂದು ಪುಷ್ಪಾ ಶಿವಶಂಕರ್ ಹೇಳಿದರು.
ಬಿ.ಜೆ.ಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಗೋಪಿ, ಮುಖಂಡರಾದ ಉಮಾ ಮಹೇಶ್ವರಿ,ಮಂಜುನಾಥ್, ನಗರಸಭಾ ಅದ್ಯಕ್ಷರಾದ ಸುಧಾ ಲಕ್ಷ್ಮೀನಾರಾಯಣ,ನಗರಸಭಾ ಸದಸ್ಯರಾದ ಪದ್ಮನಾಭ,ನಾಗರತ್ನ ಕೃಷ್ಣಮೂರ್ತಿ,ವತ್ಸಲ ಮುಂತಾದವರು ಸುದ್ದಿಘೋಷ್ಟಿಯಲ್ಲಿ ಹಾಜರಿದ್ದರು.