ಸವಿತಾ ಸಮಾಜದ ವತಿಯಿಂದ ಸ್ವರ ಸಂಗೀತ ಕಾರ್ಯಕ್ರಮ.

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ಗ್ರಾಮಾಂತರ,ತೂಬಗೆರೆ ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದಲ್ಲಿ ತಾಲ್ಲೂಕು ಸವಿತಾ ಸಮಾಜದಲ್ಲಿ ರಾಜ ಬೀದಿ ಉತ್ಸವದಲ್ಲಿ ವಾದ್ಯಗಾರರು ವತಿಯಿಂದ ವಿಶೇಷ ನಾದ ಸ್ವರ ಸಂಗೀತ ಕಾರ್ಯಕ್ರಮವನ್ನು ಅಯೊಜನೆ ಮಾಡಲಾಗಿತ್ತು‌.

ಕಾರ್ಯಕ್ರಮವನ್ನು ಉದ್ಘಾಟಿಸಿ ಕರ್ನಾಟಕ ರಾಜ್ಯ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೋಯಿಲಿ ಮಾತನಾಡಿ ನಾದಸ್ವರ ಪವಿತ್ರವಾದ ವಿದ್ಯೆ ವಿದ್ಯೆಯನ್ನು ಉನ್ನತಮಟ್ಟದ ಸಾದನೆಗೆ ಅವಕಾಶವಾಗಿದೆ ಪ್ರತಿಯೊಂದು ದೇವತಾ ಕಾರ್ಯಕ್ರಮಗಳಿಗೂ ಸಂಗೀತ ಹಾಗು ಡೋಲು ನಾದಸ್ವರ ಅವಶ್ಯಕವಾಗಿದೆ ಈ ವಿದ್ಯೆಯ ಜೊತೆಯಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೂಡಿಸಿ ಎಂದು ಸವಿತಾ ಸಮಾಜಕ್ಕೆ ಕಿವಿ ಮಾತು ಹೇಳಿದರು.

ನಂತರ ಮಾತನಾಡಿದ ದೊಡ್ಡಬಳ್ಳಾಪುರದ ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ ಸವಿತ ಸಮಾಜಕ್ಕೆ ಶಾಸಕರಾಗಿದ್ದ ಸಮಯದಲ್ಲಿ ಕೈಲಾದ ಸೇವೆ ಬಗ್ಗೆ ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ ಸಿ ವೇಣುಗೋಪಾಲ್ ಹಾಗು ಹಿಂದುಳಿದ ವರ್ಗಗಳ ಅಧ್ಯಕ್ಷರು ಎಸ್ ಆರ್. ಮುನಿರಾಜು. ಸವಿತ ಸಮಾಜದ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು
ಬಿ ಕೆ ರಾಮಚಂದ್ರಪ್ಪ ಗೌರವ ಅಧ್ಯಕ್ಷ ಎನ್ ಸತ್ಯನಾರಾಯಣ ಅಧ್ಯಕ್ಷರು ಕೆ ಆಂಜಿನಪ್ಪ ನಿವೃತ್ತ ಪೋಲೀಸ್ ಆಧಿಕಾರಿ ಎಂ ನರಸಿಂಹ ಮೂರ್ತಿ ಪ್ರದಾನ ಕಾರ್ಯದರ್ಶಿ ನರಸಿಂಹರಾಜು ಖಜಾಂಚಿ ಚಿಟ್ಟಬಾಬು ಕಾರ್ಯಕಾರಿ ಸಮಿತಿಯ ಸದಸ್ಯ ವಾದ್ಯ ಕಲಾವಿದರು ಡಿ ಎಲ್ ರಾಜಣ್ಣ. ಬಿ ಎಸ್ ಮುನಿರಾಜು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗು ಸವಿತಾ ಸಮಾಜದ ಮುಖಂಡರು ಮಹಿಳೆಯರು ಮಕ್ಕಳು ಹಾಗು ಎಸ್ ಎಸ್ ಘಾಟಿ (ಮೇಲಿನಜೂಗಾಹಳ್ಳಿ) ಗ್ರಾಮ ಪಂಚಾಯಿತಿಯ ಸಿಬ್ಬಂದಿ ಅದಿಕಾರಿಗಳು ಭಾಗವಹಿಸಿದ್ದರು.