- ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಲೋಕಾಯುಕ್ತರ ದಿಢೀರ್ ಬೇಟಿ.
ದೊಡ್ಡಬಳ್ಳಾಪುರ:ಕರ್ನಾಟಕ ಉಪ ಲೋಕಾಯುಕ್ತ,ನ್ಯಾ.ಕೆ.ಎನ್.ಫಣೀಂದ್ರ ಅವರು ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಖುದ್ದು ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ತಾಲೂಕು ಕಚೇರಿಯಲ್ಲಿ ಅಕ್ರಮಗಳ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದರು. ಈ ವೇಳೆ ಲೋಕಾಯುಕ್ತ ತುಮಕೂರು ವಿಭಾಗದ ಎಸ್ಪಿ ವಲೀ ಬಾಷಾ ಹಾಗೂ ಅಧಿಕಾರಿಗಳ ಮುಂದೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರು ಹೇಳಿಕೊಂಡರು. ಆಗ ಲೋಕಾಯುಕ್ತ ಪೊಲೀಸರು ಉಪ ಲೋಕಾಯುಕ್ತರಿಗೆ ತಾಲೂಕು ಕಚೇರಿಯಲ್ಲಿ ಕೇಳಿಬಂದ ದೂರುಗಳ ಕುರಿತು ವಿವರಿಸಿದರು.
ಅಧಿಕಾರಿಗಳ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಖುದ್ದು ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ, ಜಿಲ್ಲಾಧಿಕಾರಿ ಡಾ.ಶಿವಶಂಕರ್ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ಅಹವಾಲು ಆಲಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಪಹಣಿ ಸಮಸ್ಯೆ, ಗೋಮಾಳ ಜಮೀನು ಒತ್ತುವರಿ ಸೇರಿದಂತೆ ಹಲವು ದೂರುಗಳು ಕೇಳಿಬಂದವು. ಸಮಸ್ಯೆ ಆಲಿಸಿದ ನ್ಯಾಯಮೂರ್ತಿಗಳು, ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಹಸಿಲ್ದಾರ್, ಎಸಿ ಕಚೇರಿಯಲ್ಲಿ ಬಾಕಿ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಸಮಯ ನಿಗದಿ ಮಾಡಿ ಸಭೆ ನಡೆಸಿ ಬಾಕಿ ಉಳಿದಿರುವ ಕಡತಗಳ ಪರಿಶೀಲಿಸಿ ಪರಿಹರಿಸಬೇಕು ಎಂದರು.
ಕೆಳ ಅಧಿಕಾರಿಗಳ ಮಟ್ಟದಲ್ಲೆ ಹೆಚ್ಚು ಆರೋಪ ಕೇಳಿಬರುತ್ತಿದೆ. ಕೇಸ್ ವೈಸ್ ಪರಿಶೀಲನೆ ಆರಂಭಿಸಬೇಕು. ಕೆಲಸ ಆಗದಿದ್ದರೆ ಅರ್ಜಿಯ ನಕಲನ್ನು ನೇರಚಾಗಿ ಕಚೇರಿಗೆ ಬಂದು ದೂರು ನೀಡಿ. ಎಸ್ಪಿ, ಡಿವೈಎಸ್ಪಿಗೂ ಕೊಡಬಹುದು. ವಿಚಾರಣೆ ಮಾಡಿ ನೋಟಿಸ್ ಕೊಡಲಾಗುತ್ತಿದೆ. ತಪ್ಪಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದರು.
ಮುಂದಿನ ವಾರ ತಾಲೂಕಿನಲ್ಲಿ ಪರಿಶೀಲನಾ ಸಭೆ ಮಾಡಿ. ಕರ್ನಾಟಕ ಲೋಕಾಯುಕ್ತರ ಸಮ್ಮುಖದಲ್ಲಿ ಮಾಡಬಹುದು. ಅದರಲ್ಲಿ ಸುಳ್ಳು ದೂರು ಕೊಟ್ಟರೂ ಕ್ರಮ ನಿಶ್ಚಿತ. ವಡ್ಡರಹಳ್ಳಿ ಗೋಮಾಳ ಜಮೀನಿಗೆ ಸುಳ್ಳು ಮಾಹಿತಿ ಬಗ್ಗೆ ಮಾಹಿತಿ ಪಡೆಯಲಾಯಿತು.
ಈ ಕುರಿತು ಜಿಲ್ಲಾಧಿಕಾರಿ ಪವತಿ ಆಂದೋಲನ ಆರಂಭಿಸಲಾಗಿದೆ ಎಂದರು. ಜಿಲ್ಲೆಯಾದ್ಯಂತ ಒತ್ತುವರಿ ಪ್ರಕರಣಗಳು ಹೆಚ್ಚಿದ್ದು ಸರ್ವೇ ಕಾರ್ಯ ನಡೆಸಿ. ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.