ದೊಡ್ಡಬಳ್ಳಾಪುರ :ನಗರದ ಬಸವ ಭವನದ ಬಳಿಯ ಡೈರಿ ಮುಂಭಾಗ ತುಮಕೂರು ರಸ್ತೆಯಲ್ಲಿ ಹಿಟ್ ಅಂಡ್ ರನ್ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ನಿನ್ನೆ ರಾತ್ರಿ ಸುಮಾರು 1 ರಿಂದ 1-30 ರ ಸಮಯದಲ್ಲಿ ಘಟನೆ ನಡೆದಿದೆ.ಮೃತರನ್ನು ನಗರದ ರಾಜೀವ್ ಗಾಂಧಿ ಬಡಾವಣೆಯ 2ನೇ ಹಂತ, ಗಂಗಧಾರಪುರ ಬಡಾವಣೆ ನಿವಾಸಿ ಶಿವಶಂಕರಪ್ಪ ( 54 ) ಎನ್ನಲಾಗಿದೆ.
ಶಿವಶಂಕರಪ್ಪ ಅವರು ಯಲಹಂಕದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ರೇಷನ್ ಕಾರ್ಡ್ ಗೆ ಹೆಬ್ಬೆಟ್ಟು ನೀಡಲು ಯಲಹಂಕದಿಂದ ದೊಡ್ಡಬಳ್ಳಾಪುರದ ಮನೆಗೆ ಬರುತ್ತಿದ್ದರು, ಅಂಬೇಡ್ಕರ್ ವೃತ್ತದಲ್ಲಿ ಬಸ್ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ಅಪರಿಚಿತ ವಾಹನ ಢಿಕ್ಕಿ,ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಅಪಘಾತ ಎಸಗಿದ ವಾಹನ ಇನ್ನೂ ಪತ್ತೆ ಯಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಗುದ್ದೋಡಿದ ಪ್ರಕರಣ ದಾಖಲಾಗಿದೆ.