ರಾಸುಗಳ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಆಚರಣೆ

ದೊಡ್ಡಬಳ್ಳಾಪುರ:ಸಾಂಪ್ರದಾಯಿಕವಾಗಿ. ಹಳ್ಳಿ ಸೊಗಡಿನ ಸುಗ್ಗಿ ಹಬ್ಬ ಮಕರ ಸಂಕ್ರಾತಿ ಈ ಬಾರಿ ಗ್ರಾಮೀಣ ಬಾಗದಲ್ಲಿ ಈ ಬಾರಿ ಬಹಳಷ್ಟು ಸಂಭ್ರಮದಿಂದ ಸಡಗರದಿಂದ ಆಚರಣೆ ಮಾಡಲಾಯಿತು.

ಗ್ರಾಮೀಣ ಬಾಗದಲ್ಲಿ ಸಂಕ್ರಾತಿ ಪುರುಷ ಅಂದರೆ ಹಳ್ಳಿಗಳಲ್ಲಿ ಕಾಟುಮರಾಯ ಎಂಬ ಮೂರ್ತಿಯನ್ನು ವರ್ಷ ಸಂಕ್ರಾತಿ ಹಬ್ಬದಂದು ಸುಣ್ಣ ಬಣ್ಣದಿಂದ ಸಿಂಗಾರ ಮಾಡಿ ಪೂಜೆ ಕೈಂ ಕಾರ್ಯಗಳನ್ನು ಮಾಡಿದ ನಂತರ ಬೆಂಕಿಯ ದಾಳಿಯನ್ನು ಹಾಕಿ ವರ್ಷ ಪೂರ್ತಿ ಹೂಲ ಗದ್ದೆಗಳಲ್ಲಿ ಉಳುಮೆ ಮಾಡಿ ಎತ್ತುಗಳು ಹಾಗು ಕುರಿ ಮೇಕೆ ಇವುಗಳನ್ನು ಬೆಂಕಿ ಮೇಲೆ ಹಾಯಿಸುವುದು ರಿಂದ ಅ ವೈಭವದ ಸುಗ್ಗಿ ಹಬ್ಬವನ್ನು ಆಚರಣೆಯನ್ನು ಸಂಭ್ರಮದಿಂದ ಮಾಡುವುದು ಹಾಗು ಮತ್ತೆ ಊರಿನ ಹೆಬಾಗಿಲಿನಲ್ಲಿ ಬೆಂಕಿ ಹಾಕಿ ಯುವಕರು ಬೆಂಕಿ ಮೇಲೆ ಹಾರುವುದರಿಂದ ಮೈಯಲ್ಲಿ ಇರುವ ರೋಮಗಳು ಬೆಂಕಿಯಿಂದ ಸುಟ್ಟು ಸಾಂಪ್ರದಾಯಕ ಹಬ್ಬವಾಗಿ ಸಂಭ್ರಮಿಸುವುದು
ಮತ್ತೆ ಬಂದ ಭಕ್ತರಿಗೆ ಅವರೆ ಕಾಯಿ ಕಡಲೆ ಕಾಯಿ ಎಳ್ಳು ಬೆಲ್ಲ ತೀರ್ಥ ಪ್ರಸಾದ ರೂಪದಲ್ಲಿ ನೀಡಲಾಗುವುದು.
ತಾಲೂಕಿನ ಕಾಟಿಮರಾಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಭಕ್ತರ ಗಮನ ಸೆಳೆದವು. ಗ್ರಾಮಾಂತರದ ಕುಂಟನ ಹಳ್ಳಿ, ದೊಡ್ಡ ತುಮಕೂರು, ಚಿಕ್ಕತುಮಕೂರು, ಮಜರ ಹೊಸಳ್ಳಿ, ಮೆಳೇಕೋಟೆ ಮುಂತಾದ ಕಡೆಗಳಲ್ಲಿ ಜಾನುವಾರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ದೃಶ್ಯ ಮನ ಮೋಹಕವಾಗಿತ್ತು.