ದೊಡ್ಡಬಳ್ಳಾಪುರ:ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೧೦ ಸಾವಿರ ಶಿಕ್ಷಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡಲಾಗಿದೆ. ಎಂದು ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ನಗರದ ಅನಿಬೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ಶಿಕ್ಷಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಬಿರ ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಈ ಹಿನ್ನಲೆ ಯಲ್ಲಿ ಶಿಕ್ಷಕರಿಗೆ ತರಬೇತಿಯೂ ಸಹಾ ಉತ್ತಮ ಗುಣಮಟ್ಟದಲ್ಲಿ ನೀಡಲಾಗಿದೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯರ್ತೆಯರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ತರಬೇತಿ ನೀಡಲು ಆದೇಶಿದ್ದು ಮುಂದಿನ ದಿನಗಳಲ್ಲಿ ಸರಕಾರದ ಸಹಕಾರದೊಂದಿಗೆ ತರಬೇತಿ ನೀಡುವ ಚಿಂತನೆ ನಡೆಸಲಾಗುತ್ತಿದೆ. ರಾಜ್ಯ ಸರಕಾರಕ್ಕೆ ಹೊಸ ಶಿಕ್ಷಣ ನೀತಿಯಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಐಚ್ಛಿಕವಾಘಿರುವ ವಿಷಯವನ್ನು ಗಣನೆಗೆ ತೆಗದುಕೊಂಡು ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಲು ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಜಾನಪದ ವಿದ್ವಾಂಸ ಹಾಗು ಕವಿ ಗೊರೂರು ಚೆನ್ನಬಸಪ್ಪ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆ ಕುರಿತು ಉಪನ್ಯಾಸ ನೀಡಿದರು. ನಮ್ಮ ಭಾವನೆಯ ಐಕ್ಯತೆಯೊಂದಿಗೆ ರಾಷ್ಟ್ರೀಯತೆ ಹೊಂದಿರಬೇಕು ಆಗ ಸಮಗ್ರ ಭಾರತವನ್ನು ಸದೃಢವಾಗಿ ಕಟ್ಟಬಹುದು. ಮನುಷ್ಯನು ಒಂದುವೇಳೆ ನಾಗರಿಕತೆ ಯನ್ನಾದರೂ ಸಾಲ ಪಡೆಯ ಬಹುದು ಆದರೆ ನಮ್ಮ ಸಂಸ್ಕೃತಿಯನ್ನು ಯಾರಿಂದಲೂ ಸಾಲ ಪಡೆಯಲು ಸಾಧ್ಯವಿಲ್ಲ ಅದು ನಮ್ಮ ಮನ ಸಾಕ್ಷಿಗೆ ಅನುಗುಣವಾಗಿ ಮುಂದುವರೆಸಿಕೊಂಡು ಹೋಗುವ ಜವಬ್ದಾರಿ ಪ್ರತಿಯೊಬ್ಬರದಾಗಿದೆ ಎಂದರು. ನಮ್ಮ ನುಡಿಗಳು ಬೆಡಗಾಗಿದೆ ನಡೆಯ ಸಂಸ್ಕೃತಿ ಯಾಗಿಲ್ಲ ಈಗಾಗಿ ಪ್ರತಿಯೊಬ್ಬರು ಚಿಂತಿಸಬೇಕಿದೆ ಎಂದರು. ಸೇವಾ ಮನೋಭಾವವನ್ನು ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ತರವಾದ ಕಾರ್ಯ ನಡೆಸುತ್ತಿದೆ ಎಂದು ಪ್ರಶಂಸಿದರು.
ವಿಶ್ವದಲ್ಲಿ ಯಾವವ ದರ್ಮ ಎನು ಏಳುತ್ತದೆ
ಹಿಂದೂ ದರ್ಮ: ವ್ಯಕ್ತಿಯ ವಿಕಾಸಕ್ಕೆ ಅಧ್ಯಾತ್ಮಿಕ ದೈವ ಭಕ್ತಿ ಅಗತ್ಯ .
ದೇಶ ಸಾಧನೆಗೆ ಪ್ರತಿ ವಾತ್ಸಲ್ಯ ಗಳಿಂದ ಗೆಲ್ಲಬಹುದು ಎಂಬುದು : ಭೌಧ ದರ್ಮ ಕಾಯ ವಾಚಾ ಮನಸಾ ಯಾವ ರೂಪದಲ್ಲಿ ಯಾದರು ಹಿಂಸೆ ಸಲ್ಲದು ಎನ್ನುತ್ತೆ : ಜೈನ ದರ್ಮ
ಯಾರನ್ನ ಪರಕೀಯರಂತೆ ಭಾವಿಸಿದೆ ಎಲ್ಲಾರು ನನ್ನವರು ಎಂದು ಭಾವಿಸಿ ಎನ್ನುತ್ತೆ: ಗ್ರೀಷ್ಮ ಧರ್ಮ ಇದೆ ರೀತಿ ಈ ಜಗತ್ತಿನಲ್ಲಿ ನೂರಾರು ಧರ್ಮ ಗಳಿವೆ ಎಲ್ಲಾ ಧರ್ಮ ಗಳು ವಿಶ್ವದ ಶಾಂತಿ ಸಹನೆ ಸೌಹಾರ್ದತೆ ಹಾಗು ನೆಮ್ಮದಿ ಬಯಸುತ್ತಿದೆ ಅದರೆ ಕೆಲವು ದರ್ಮ ಗುರುಗಳು ತಮ್ಮ ದರ್ಮ ಕೋಮು ಗಲಭೆ ಸೃಷ್ಟಿಸಿ ಜಗತ್ತಿನ ಶಾಂತಿಯನ್ನು ಆಳುಮಾಡುತ್ತಿವೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ರಾಜ್ಯ ಸ್ಕೌಟ್ಸ್ ಗೈಡ್ಸ್ ನ ಪದಾಧಿಕಾರಿಗಳು, ಎಜಾಕ್ಸ್ ಕಂಪನಿಯ ಸಿಎಸ್ಆರ್ ಅಧಿಕಾರಿ ಮಂಜುನಾಥ್ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ರಾಷ್ಟ್ರಯ ಮಟ್ಟದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ರಾಜ್ಯ ತರಬೇತುದಾರರಿಗೆ ಪ್ರಶಂಸನಾ ಪ್ರಮಾಣ ಪತ್ರ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ವಿತರಿಸಿದರು.