ಜನಪದ ಕಲೆ, ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಯುವಜನತೆ ಸಿದ್ದರಾಗಿ : ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಸಲಹೆ

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಯುವ ಸೌರಭ 2024’ರ ಸಾಂಸ್ಕøತಿಕ ಕಾರ್ಯಕ್ರಮವನ್ನು ಶಾಸಕರಾದ ಎ‌ ಆರ್ ಕೃಷ್ಣಮೂರ್ತಿ ರವರು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ಯುವಕರು ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ವೀಕ್ಷಣೆಯಿಂದ ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗುತ್ತಿದ್ದಾರೆ. ಇದು ಸಲ್ಲದು. ಸಾಮಾಜಿಕ ಮಾಧ್ಯಮಗಳಿಂದ ಉತ್ತಮವಾದದ್ದನ್ನು ಪಡೆದು ಬೇಡದ್ದನ್ನು ಬಿಡಬೇಕು. ತಂದೆ ತಾಯಿಯನ್ನು ಗೌರವಿಸುವಂತೆ ನಮ್ಮ ಜನಪದ ಕಲೆ, ಸಂಸ್ಕøತಿಗಳನ್ನು ಗೌರವಿಸಬೇಕು. ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕು ಎಂದರು.

ಚಾಮರಾಜನಗರ ಜನಪದ ಕಲೆಗಳ ತವರೂರು. ಕಲೆಯ ಬೀಡಾಗಿದೆ. ಮಲೇ ಮಹದೇಶ್ವರರು, ಬಿಳಿಗಿರಿ ರಂಗನಾಥಸ್ವಾಮಿ, ಮಂಟೇಸ್ವಾಮಿ, ಸಿದ್ದಾಪ್ಪಾಜಿ ಅವರುಗಳು ನಾಡಿನುದ್ದಕ್ಕೂ ನಡೆದಾಡಿ ಜಾನಪದ ಸಂಸ್ಕøತಿಯನ್ನು ಪಸರಿಸಿದ ಜನಪದ ಕಾವ್ಯಗಳು ಇಂದು ಮನೆಮಾತಾಗಿವೆ. ವಿದ್ಯಾರ್ಥಿಗಳು ಶಾಲಾ ಕಾಲೇಜು ದಿನಗಳಲ್ಲಿ ಕಲೆ, ಸಂಸ್ಕøತಿ, ಕ್ರೀಡೆ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಜನಪದ ಕಲೆಗಳಲ್ಲಿ ಫಿನ್‍ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದು, ನಂತರದ 2ನೇ ಸ್ಥಾನದಲ್ಲಿ ಭಾರತವಿದೆ. ಭಾರತದಲ್ಲಿ ಕರ್ನಾಟಕ ಜಾನಪದ ಕಲೆ ಪ್ರಸ್ತುತ ಪಡಿಸುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಚಲನಚಿತ್ರ ನಟರಾದ ಡಾ. ರಾಜ್‍ಕುಮಾರ್ ನಮ್ಮ ಜಿಲ್ಲೆಯವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯಾಗುತ್ತದೆ. ಪೌರಾಣಿಕ ಹಾಗೂ ಸಾಮಾಜಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ರಾಜ್‍ಕುಮಾರ್ ಅವರನ್ನು ನಾವೆಲ್ಲರೂ ಆದರ್ಶವಾಗಿಟ್ಟುಕೊಳ್ಳಬೇಕಾಗಿದೆ ಎಂದು ಶಾಸಕರಾದ ಎ‌ ಆರ್ ಕೃಷ್ಣಮೂರ್ತಿ ಅವರು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ ಅವರು ಮಾತನಾಡಿ ಯುವಜನತೆ ತಮ್ಮಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಹೊರಸೂಸಲು ಯುವಸೌರಭ ಉತ್ತಮ ವೇದಿಕೆಯಾಗಿದೆ. ಸಂಸ್ಕøತಿ ನಿಂತ ನೀರಾಗಬಾರದು. ಅದು ಎಲ್ಲಾ ಕಾಲಕ್ಕೂ ಸಮಸ್ಥಿತಿ ಕಾಯ್ದುಕೊಳ್ಳಬೇಕಾದರೆ ಎಲ್ಲಾ ಕಾಲಮಾನದಲ್ಲೂ ಕ್ರೀಯಶೀಲವಾಗಿರಬೇಕು. ಜನಪದ ಕಲೆಗಳ ಪ್ರದರ್ಶನ ನಿರಂತರವಾಗಿರಬೇಕು. ಯುವಜನತೆ ಇದನ್ನು ಅರಿತು ಮುನ್ನಡೆಯಬೇಕು. ಪ್ರಸ್ತುತ ದಿನಗಳಲ್ಲಿ ಕಲೆ, ಸಂಸ್ಕøತಿ ವ್ಯಾಪಾರೀಕರಣಗೊಳ್ಳುತ್ತಿರುವುದನ್ನು ಯುವಜನತೆ ತಡೆಯಬೇಕಿದೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಶಿಸಿಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗಲು ಇಲಾಖೆವತಿಯಿಂದ ಯುವ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ 15ರಿಂದ 30ರ ವಯೋಮಾನದವರಲ್ಲಿ ಕಲಾ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸಲು ನಡೆಸುತ್ತಿರುವ ಈ ವಿನೂತನ ಕಾರ್ಯಕ್ರಮದ ಸದುಪಯೋಗವನ್ನು ಯುವಜನರು ಪಡೆಯಬೇಕು ಎಂದರು.
ಗ್ರಾಮಪಂಚಾಯತಿ ಅಧ್ಯಕ್ಷರಾದ ರಾಜಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಿಯಾಶಂಕರ್, ಉಪಪ್ರಾಂಶುಪಾಲರಾದ ಶಿವಣ್ಣ, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಮಹದೇವಸ್ವಾಮಿ, ಕಾಂಗ್ರೆಸ್ ಮುಖಂಡರಾದ ಎಚ್.ವಿ. ಚಂದ್ರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.‌‌ ‌‌

ವರದಿ ಆರ್ ಉಮೇಶ್ ಚಾಮರಾಜನಗರ