ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಚಿರತೆ ಹಾವಳಿ ಮುಂದುವರಿದಿದೆ.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೋಳೂರು ರಸ್ತೆಯಲ್ಲಿ ಬೈಕ್ ಸವಾರರಿಗೆ ಅಡ್ಡ ಬಂದಿತ್ತು.ಬಾನುವಾರ ರಾತ್ರಿ ಹೊಸಹಳ್ಳಿ ಸಮೀಪದ ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮದಲ್ಲಿ ಮೇಕೆಯನ್ನು ಚಿರತೆ ಬಲಿಪಡೆದಿದೆ.ಕಳೆದ ಕೆಲ ದಿನಗಳ ಹಿಂದೆ ಕುಕ್ಕಲಹಳ್ಳಿ ಗ್ರಾಮದಲ್ಲೂ ಸಹ ಕಾಂಪೌಂಡ್ ಒಳಗೆ ಇದ್ದ ಮೇಕೆಯನ್ನು ಬಲಿ ಪಡೆದಿತ್ತು.ಚಿರತೆ ಹಾವಳಿಯಿಂದ ತಾಲ್ಲೋಕಿನ ಜನತೆ ಭಯಬೀತರಾಗಿದ್ದು ಕೂಡಲೆ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.