ದೊಡ್ಡಬಳ್ಳಾಪುರ ದಲ್ಲಿ ಜೆ. ಡಿ. ಎಸ್ ಪಕ್ಷವನ್ನು ಸದೃಢ ಗೊಳಿಸುವುದೇ ನಮ್ಮ ಗುರಿ–ಹರೀಶ್ ಗೌಡ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ ಪರಿಣಾಮ ಕಾರ್ಯಕರ್ತರು ಸ್ವಲ್ಪ ಮಟ್ಟಿಗೆ ಎದೆ ಗುಂದಿದ್ದಾರೆ. ಹಾಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಕಳೆಗುಂದಿದ್ದ ಪಕ್ಷದ ಸಂಘಟನೆಯನ್ನು ಬಲಿಷ್ಠ ಗೊಳಿಸಲಾಗುವುದು ಎಂದು ಜೆ. ಡಿ. ಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದ್ದಾರೆ.
ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹರೀಶ್ ಗೌಡರು, ಕಳೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣದ ಹೊಳೆ ಪ್ರಭಾವದಿಂದ ಪಕ್ಷ ಸೋತಿರಬಹುದು. ಆದರೆ ಕಾರ್ಯಕರ್ತರಲ್ಲಿ ಪಕ್ಷ ನಿಷ್ಠೆ ಕಡಿಮೆಯಾಗಿಲ್ಲ. ಹಿಂದೆ ಆಗಿರುವ ಸೋಲನ್ನೇ ಸವಾಲಾಗಿ ಸ್ವೀಕರಿಸಿ ಮುಂಬರುವ ಎಂ. ಪಿ, ಜಿ. ಪಂ, ತಾ. ಪಂ ಚುನಾವಣೆಗಳಲ್ಲಿ ಪಕ್ಷವನ್ನು ಬಲಿಷ್ಠ ಗೊಳಿಸುವ ಬಗ್ಗೆ ಈಗಾಗಲೇ ನಗರ ಹಾಗೂ ಗ್ರಾಮಾಂತರ ಹಲವಾರು ಮುಖಂಡರ ಜೊತೆ ಮಾತುಕತೆ ನಡೆಸಿದ್ದೇವೆ. ಹೊಸವರ್ಷದಿಂದ ಪಕ್ಷದ ಚಟುವಟಿಕೆಗಳನ್ನು ಚುರುಕು ಗೊಳಿಸಿ ಕಾರ್ಯಕರ್ತರಲ್ಲಿ ಆಶಾಭಾವನೆ ಮೂಡಿಸುವ ಕೆಲಸವನ್ನು ಆರಂಭಿಸಲಿದ್ದೇವೆ ಎಂದು ಹೇಳಿದ ಹರೀಶ್ ಗೌಡರು, ಮುಂಬರುವ ಚುನಾವಣೆಗಳಲ್ಲಿ ಪಕ್ಷದ ವರಿಷ್ಟರಾದ ದೇವೇಗೌಡ ರ ಹಾಗೂ ಕುಮಾರಣ್ಣ ನವರ ಆಶಯದಂತೆ ಬಿ. ಜೆ. ಪಿ ಜೊತೆ ಮೈತ್ರಿಗೆ ನಮ್ಮೆಲ್ಲರ ಸಹಮತವಿದೆ. ಸಣ್ಣಪುಟ್ಟ ಗೊಂದಲಗಳನ್ನು ಶೀಘ್ರದಲ್ಲಿ ಬಗೆಹರಿಸಿ ಕೊಳ್ಳುತ್ತೇವೆ ಮುಂಬರುವ ದಿನಗಳಲ್ಲಿ ಪಕ್ಷ ಅಧಿಕಾರ ಹಿಡಿಯಲಿದೆ. ಆದ್ದರಿಂದ ಕಾರ್ಯಕರ್ತರು ಎದೆ ಗುಂದಬೇಕಿಲ್ಲ. ರಾಜ್ಯಮಟ್ಟದಲ್ಲಿ ನೆಡೆಯುತ್ತಿರುವ ಮೈತ್ರಿ ಮಾತುಕತೆ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ನಾವು ಸಹಕಾರ ನೀಡುತ್ತೇವೆ. ಅದೇ ರೀತಿ ಜನವಿರೋಧಿ ನೀತಿ ಅನುಸರಿಸಿದರೆ ವಿರೋದಿಸುತ್ತೇವೆ. ಹಾಗಾಗಿ ಬಿ. ಜೆ. ಪಿ. ಯವರು ನಮ್ಮ ಜೊತೆ ಸ್ಪಂದಿಸಬೇಕಾಗಿದೆ. ಒಟ್ಟಾರೆ ಮೈತ್ರಿ ಮಾಡಿಕೊಂಡು, ಗ್ರಾಮವಾಸ್ತವ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತೇವೆ ಎಂದು ಹರೀಶ್ ಗೌಡರು ಹೇಳಿದರು.

ಚಿತ್ರ ನಿರ್ಮಾಪಕ ಸಾರಥಿ ಸತ್ಯಪ್ರಕಾಶ್ ಮಾತನಾಡಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ನಾಲ್ಕು ಬಾರಿ ಸ್ಪರ್ದಿಸಿ ಮೂರೂ ಬಾರಿ ಕಡಿಮೆ ಅಂತರದಿಂದ ಸೋತಿದೆ. ಕಳೆದ ಚುನಾವಣೆಯಲ್ಲಿ ವಿರೋಧ ಪಕ್ಷಗಳ ದುಡ್ಡಿನ ಚಲಾವಣೆ ಇಂದಾಗಿ ಮೂರನೇ ಸ್ಥಾನಕ್ಕೆ ಬರುವಂತಾಯಿತು. ಹರೀಶ್ ಗೌಡರಂತ ಸಮರ್ಥ ನಾಯಕತ್ವದಲ್ಲಿ ಪಕ್ಷ ಸದೃಢ ವಾಗುವುದರಲ್ಲಿ ಅನುಮಾನವಿಲ್ಲ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ಜೆ ಡಿ ಎಸ್ ಅಧಿಕಾರ ಹಿಡಿಯಲ್ಲಿದೆ. ಚುನಾವಣೆಗಳ ಕೊನೆವರೆಗೂ ಅಭ್ಯರ್ಥಿಗಳ ಆಯ್ಕೆ ಮಾಡದೇ ಕೊನೆಗಳಿಗೆಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಸಹ ಪಕ್ಷದ ಹಿನ್ನೆಡೆಗೆ ಕಾರಣವಾಗಿದೆ. ಹಾಗಾಗಿ ಇದನ್ನು ಪಕ್ಷದ ವರಿಷ್ಟರು ಗಮನ ಹರಿಸಬೇಕು ಎಂದರು.

ಪಕ್ಷದ ಹಿರಿಯ ಮುಖಂಡರಾದ ಹಾಡೋನಹಳ್ಳಿ ಅಪ್ಪಯ್ಯಣ್ಣ ಮಾತನಾಡಿ ಕಳೆದ ಚುನಾವಣೆಯಲ್ಲಿ ಪಕ್ಷ ಮೂರನೇಯ ಸ್ಥಾನ ಪಡೆದಿದ್ದರು ಕಾರ್ಯಕರ್ತರಲ್ಲಿ ಶಕ್ತಿ ಕುಂದಿಲ್ಲ.ಪದೇ ಪದೇ ಹಿನ್ನಡೆಯಾಗಿದ್ದು ಕಾರ್ಯಕರ್ತರನ್ನು ಸ್ವಲ್ಪ ಮಟ್ಟಿಗೆ ದೃತಿಗೆಡಿಸಿದೆ.ಆದರೆ ಈಗ ಹರೀಶ್ ಗೌಡರಂತ ಸಮರ್ಥ ನಾಯಕರು ಸಂಘಟನೆಗೆ ಇಳಿದಿದ್ದು ನಾವೆಲ್ಲ ಅವರ ಜೊತೆ ಬೆಂಬಲಕ್ಕೆ ನಿಂತಿದ್ದೇವೆ.ಕಾರ್ಯಕರ್ತರು ನಿರಾಸೆ ಗೊಳ್ಳಬೇಕಿಲ್ಲ ಎಂದು ಹೇಳಿದರು.

ನಗರಸಭಾ ಸದಸ್ಯ ತ.ನ.ಪ್ರಭುದೇವ್ ಮಾತನಾಡಿ ನಾಲ್ಕು ಚುನಾವಣೆಗಳಲ್ಲಿ ಪಕ್ಷ ಮೂರು ಬಾರಿ ಕಡಿಮೆ ಅಂತರದಲ್ಲಿ ಸೋತಿದೆ.ಕಳೆದ ಬಾರಿ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿರಬಹುದು.ಅದನ್ನು ಗಮನ ದಲ್ಲಿ ಇಟ್ಟುಕೊಂಡು ಮುಂದಿನ ಚುನಾವಣೆಗಳಲ್ಲಿ ಹರೀಶ್ ಗೌಡರ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸಿ ತಾಲ್ಲೂಕಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ನಮ್ಮ ಶಕ್ತಿ ಏನೆಂದು ತಿಳಿಸೋಣ.ದೇವೇಗೌಡರ ಹಾಗೂ ಕುಮಾರಸ್ವಾಮಿರವರ ಬಿಜೆಪಿ ಜೊತೆ ಮೈತ್ರಿ ಪ್ರಯತ್ನಕ್ಕೆ ನಾವೆಲ್ಲರೂ ಕೈ ಜೋಡಿಸೋಣ.ಅವರ ಆದೇಶದಂತೆ ಮುಂಬರುವ ದಿನಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವುದು ನಮ್ನೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಮಹಿಳಾ ಮುಖಂಡರಾದ ಕಾಂತಾಮಣಿ,ದೇವರಾಜಮ್ಮ,ಹಿರಿಯರಾದ ಕುರುವಗೆರೆ ನರಸಿಂಹಯ್ಯ, ವಡ್ಡರಹಳ್ಳಿ ರವಿ ,ಕೆಂಪರಾಜು,ಪಕ್ಷದ ಮುಖಂಡರಾದ ರಾ.ಬೈರೇಗೌಡ,ಶಾಂತಮ್ಮ,ತಳಗವಾರ ನಾಗರಾಜ್,ಕುಂಟನಹಳ್ಳಿ ಮಂಜುನಾಥ್,ಆನಂದ್,ನಾರಾಯಣ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.