ಹೊಸವರ್ಷದ ದಿನಚರಿ ಬಿಡುಗಡೆ ಮಾಡುವ ಮೂಲಕ ಪಕ್ಷಕ್ಕೆ ಕಾಯಕಲ್ಪ ನೀಡಲಿದ್ದೇವೆ…. ಹರೀಶ್ ಗೌಡ
ದೊಡ್ಡಬಳ್ಳಾಪುರ,.. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಾತ್ಯತೀತ ಜನತಾದಳ ಸದೃಢವಾಗಿದೆ. ಆದರೆ ವಿಧಾನಸಭೆ ಚುನಾವಣೆ ನೀರಸ ಫಲಿತಾಂಶದ ಬಳಿಕ ದಳದ ಕಾರ್ಯಕರ್ತರು ಸ್ವಲ್ಪ ಮಟ್ಟಿಗೆ ಬೇಸರ ಗೊಂಡಿದ್ದಾರೆ. ಈಗ ತಾಲೂಕಿನಲ್ಲಿ ದಳದ ಕಾರ್ಯಕರ್ತರಲ್ಲಿ ಚೈತನ್ಯ ಮೂಡಿಸಬೇಕಿದೆ. ಹಾಗಾಗಿ ದಿನಾಂಕ 25ರಂದು ಒಕ್ಕಲಿಗರಭವನದಲ್ಲಿ ಪಕ್ಷದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ದಳದ ಸಂಘಟನೆಯನ್ನು ಚುರುಕು ಗೊಳಿಸಳಿದ್ದೇವೆ ಎಂದು ರಾಜ್ಯ ಜನತಾದಳದ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ದಳದ ವತಿಯಿಂದ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹರೀಶ್ ಗೌಡರು ಮಾತನಾಡಿ ಕ್ಷೇತ್ರದಲ್ಲಿ ಕಾರ್ಯಕರ್ತರ ಕಾರ್ಯಕರ್ತರ ಪರಿಶ್ರಮದಿಂದ ಜೆ. ಡಿ. ಎಸ್ ಸಂಘಟನಾಶೀಲವಾಗಿದೆ ವಿಧಾನಸಭೆ ಚುನಾವಣೆ ವ್ಯತೀರಿಕ್ತಾ ಫಲಿತಾಂಶದಿಂದ ಕಾರ್ಯಕರ್ತರು ಭ್ರಮ ನಿರಸ ಗೊಂಡಿದ್ದಾರೆ.ಜೊತೆಗೆ ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆಗುಂದಿದ್ದ ಪಕ್ಷವನ್ನು ಮತ್ತೆ ಸಂಘಟಿಸುವ ದೃಷ್ಟಿಯಿಂದ ಹಿರಿಯ ನಾಯಕರ ಮಾರ್ಗದರ್ಶನ ದಲ್ಲಿ ಪುನರ್ ಸಂಘಟನಾ ಕಾರ್ಯವನ್ನು ಹೊಸವರ್ಷದಿಂದ ಪ್ರಾರಂಭಿಸಿಲಿದ್ದೇವೆ.ಮುಂಬರುವ ದಿನಗಳಲ್ಲಿ ಎಲ್ಲಾ ಕಾರ್ಯಕರ್ತರನ್ನು,ಮುಖುಂಡರನ್ನು ಒಗ್ಗೂಡಿಸುವ ಮೂಲಕ ಪಕ್ಷವನ್ನು ಸದೃಡಗೊಳಿಸುವ ಗುರಿ ನಮ್ಮದು ಎಂದು ಹರೀಶ್ ಗೌಡರವರು ಹೇಳಿದರು.
ಹಿರಿಯ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣ ಮಾತನಾಡಿ ಪಕ್ಷವು ತಾಲ್ಲೋಕಿನಲ್ಲಿ ಈಗಲೂ ಸುಸ್ಥಿತಿಯಲ್ಲಿದೆ.ವಿಧಾನಸಭಾ ಚುನಾವಣಾ ಫಲಿತಾಂಶದಿಂದ ತಾವುದೇ ಕಾರ್ಯಕರ್ತರು ಎದೆಗುಂದಬೇಕಿಲ್ಲ ಎಷ್ಟೇ ಗೊಂದಲಗಳಿದ್ದರು ಯಾವುದೇ ಮುಖಂಡರು ಪಕ್ಷ ಬಿಟ್ಟು ಹೋಗಿಲ್ಲ.ದೇವೇಗೌಡ ಹಾಗೂ ಕುಮಾರಸ್ವಾಮಿ ರವರ ಆದೇಶದ ಮೇರೆಗೆ ಪಕ್ಷವನ್ನು ಮತ್ತಷ್ಟು ಸದೃಡಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ನಗರಸಭಾ ಸದಸ್ಯ ತ.ನ ಪ್ರಭುದೇವ್ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಕೆಳ ಹಂತದ ಎಲ್ಲಾ ಚುನಾವಣೆಗಳಲ್ಲು ಪಕ್ಷ ಗೆಲ್ಲುತ್ತಲಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸೋಲು ಕಾಣುತ್ತಿರುವುದು ವಿಪರ್ಯಾಸ.ಇದು ಕಾರ್ಯಕರ್ತರನ್ನು ದೃತಿಗೆಡಿಸಿದೆ.ಪಕ್ಷದಲ್ಲಿ ಬಿನ್ನಾಬಿಪ್ರಾಯಗಳು ಸಹಜ.ಈಗಾಗಲೆ ಎಲ್ಲಾ ಮುಖಂಡರು ಹಾಗು ಕಾರ್ಯಕರ್ತರು ಸೇರಿ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನೆಡೆದಿದೆ ಈಗಾಗಿ ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಪಕ್ಷ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳಿದರು.
ಸುದ್ದಿಘೋಷ್ಟಿಯಲ್ಲಿ ಹಿರಿಯ ಮುಖುಂಡರಾದ ಕುರುವಗೆರೆ ನರಸಿಂಹಯ್ಯ,ಆನಂದ್,ಮಾಜಿ ನಗರಸಭಾ ಸದಸ್ಯ ತಳಗವಾರ ನಾಗರಾಜ್,ಮುಖಂಡರಾದ ಕುಂಟನಹಳ್ಳಿ ಮಂಜು, ನಾರಾಯಣ್,ಪ್ರವೀಣ್ ಮುಂತಾದವರು ಭಾಗವಹಿಸಿದ್ದರು.