ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ ಆಯ್ಕೆ.

ದೊಡ್ಡಬಳ್ಳಾಪುರ:ನಗರಸಭೆಯ ಎರಡನೇ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿ. ಎಸ್. ರವಿಕುಮಾರ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿ. ಜೆ. ಪಿ ದಳ ಮೈತ್ರಿಯಾಗಿ ಅಧಿಕಾರ ಹಿಡಿದಿದೆ. ಮೈತ್ರಿಯ ಅನುಸಾರ ದಳಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಾಗಿದ್ದು, ದಳ ದೊಳಗಿನ ಅಧಿಕಾರ ಹಂಚಿಕೆಯಂತೆ ದಳದ ಆದಿಲಕ್ಷ್ಮೀ ರವರಿಂದ ತೆರವಾದ ಸ್ಥಾಯಿ ಸಮಿತಿ ದಳದ ಹಿರಿಯ ಸದಸ್ಯ ರವಿಕುಮಾರ್ ನಗರಸಭೆಯ ಸರ್ವಸದಸ್ಯರ ಬೆಂಬಲದಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಕ್ಷತೀತವಾಗಿ ಎಲ್ಲಾ ಸದಸ್ಯರು ನನ್ನನ್ನು ಬೆಂಬಲಿಸಿದ್ದಾರೆ. ಅವರ ಆಶಯದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ರವಿಕುಮಾರ್ ಹೇಳಿದರು.
ಜಾತ್ಯತೀತ ಜನತಾ ದಳದ ಹಿರಿಯ ಮುಖಂಡರಾದ ಹಾಡೋನಹಳ್ಳಿ ಅಪ್ಪಯ್ಯಣ್ಣ, ಕುರುವಿಗೆರೆ ನರಸಿಂಹಯ್ಯ, ಜೆ. ಡಿ. ಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ, ಟಿ. ಎ. ಪಿ. ಎಂ. ಸಿ. ಎಸ್ ನಿರ್ದೇಶಕ ಅಂಜನಗೌಡ, ಮಾಜಿ ನಗರಸಭಾ ಸದಸ್ಯರಾದ ಜಿ. ಸತ್ಯನಾರಾಯಣ, ಆರ್. ಕೆಂಪರಾಜು, ತಳವಾರ್ ನಾಗರಾಜ್, ಕುಂಟನಹಳ್ಳಿ ಮಂಜುನಾಥ್, ಕೃಷ್ಣಮೂರ್ತಿ, ಅಶ್ವಥ್ ನಾರಾಯಣ್ ಗೌಡ, ನಗರಸಭಾ ಧ್ಯಕ್ಷೆ ಸುಧಾ ಲಕ್ಷ್ಮಿ ನಾರಾಯಣ್, ಉಪಾಧ್ಯಕ್ಷೆ ಪರ್ಹನ್ ತಾಜ್ ನಗರಸಭಾ ಸದಸ್ಯರಾದ ಶಿವಶಂಕರ್, ಮುನಿರಾಜ್, ಆನಂದ್, ಮುಂತಾದವರು ರವಿಕುಮಾರ್ ರವರನ್ನು ಅಭಿನಂದಿಸಿದ್ದಾರೆ.