ದೊಡ್ಡಬಳ್ಳಾಪುರ ವಕೀಲರ ಸಂಘದ ಅಭಿವೃದ್ಧಿಗಾಗಿ ಸ್ಪರ್ಧೆ…. ಸಿ. ಪ್ರಕಾಶ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘಕ್ಕೆ ಅಮುಲಾಗ್ರ ಬದಲಾವಣೆ ತರಬೇಕಿದೆ. ಈ ನಿಟ್ಟಿನಲ್ಲಿ ಹಿರಿಯ ಹಾಗೂ ಕಿರಿಯ ವಕೀಲ ಮಿತ್ರರ ಸಲಹೆ ಮೇರೆಗೆ ನಾನು ವಕೀಲರ ಸಂಘದ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ ಎಂದು ಅಧ್ಯಕ್ಷ ಆಕಾಂಕ್ಷಿ ನೋಟರಿ, ವಕೀಲ ಸಿ. ಪ್ರಕಾಶ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ವಕೀಲ ಮಿತ್ರರು ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಾಶ್ ಮಾತನಾಡಿ, ನಾನು ಹಿಂದೆ ವಕೀಲರ ಸಂಘದಲ್ಲಿ ಖಜಾಂಚಿಯಾಗಿ ಕೆಲಸ ಮಾಡಿದ್ದೇನೆ. ಜೊತೆಗೆ ನನಗೆ ತಾಲೂಕಿನ ಹಿರಿಯ, ಕಿರಿಯ ವಕೀಲರ ಜೊತೆ ಉತ್ತಮ ಬಾಂದವ್ಯವಿದೆ. ಇದುವರೆಗೆ ಸಂಘದ ಪದಾಧಿಕಾರಿಗಳಾದವರು ಸಂಘದ ಅಭಿವೃದ್ಧಿಗೆ ಸ್ಪಂದಿಸಿಲ್ಲ. ಸಂಘದ ಪ್ರಗತಿಗಾಗಿ ನನ್ನದೇ ಆದ ಹಲವು ಆಶಯಗಳಿವೆ. ಅದರಲ್ಲಿ ಪ್ರಮುಖವಾಗಿ ವಕೀಲರ ಸಂಘಕ್ಕೆ ಮೂರೂ ಅಂತಸ್ತಿನ ಕಟ್ಟಡ ನಿರ್ಮಾಣ, ಮಹಿಳಾ ವಕೀಲರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಅದರಲ್ಲಿ ನವ ಅಗತ್ಯ ಪರಿಕರಗಳ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ಹಾಗೂ ಶೌಚಾಲಯ ವ್ಯವಸ್ಥೆ, ಆವರಣದಲ್ಲಿ ಸಿಮೆಂಟ್ ಬೆಂಚಿನ ವ್ಯವಸ್ಥೆ,200ಜನಕೂಡುವ ಸಭಾಂಗಣ, ಸಂಘದಲ್ಲಿ ಟೈಪಿಂಗ್ ಸೆಂಟರ್, ಜೆರಾಕ್ಸ್, ಕಂಪ್ಯೂಟರ್ ಪ್ರಿಂಟಿಂಗ್ ವ್ಯವಸ್ಥೆ, ವೃತ್ತಿ ನಿರತ ವಕೀಲರು k. S. B. C ಪ್ರತಿವರ್ಷ ಭವಿಷ್ಯನಿಧಿ ಶುಲ್ಕ ಪಾವತಿಸಲು ಮತ್ತು c. O. P. ದಾಖಲೆಗಳನ್ನು ಸಂಘದ ವತಿಯಿಂದ ವ್ಯವಸ್ಥೆ, ನವ ವೃತ್ತಿನಿರತ ವಕೀಲರಿಗೆ ಕಾರ್ಯಾಗಾರ, ಹಾಗೂ ನುರಿತ ವಕೀಲರಿಂದ ತರಬೇತಿ ಶಿಬಿರಗಳ ಆಯೋಜನೆ ಸೇರಿದಂತೆ ಸುಮಾರು 22ಅಂಶಗಳ ಯೋಜನೆಯನ್ನು ಅಸ್ತಿತ್ವಕ್ಕೆ ತರುವುದು ನನ್ನ ಪ್ರಮುಖ ಗುರಿಯಾಗಿದೆ. ಇದಕ್ಕಿಂತ ಮುಖ್ಯವಾಗಿ ಹಿರಿಯ ಮತ್ತು ಕಿರಿಯ ವಕೀಲರ ಸಮನ್ವಯ ಸಾದಿಸುವುದು. ವಕೀಲರ ಸಂಘದ ಪ್ರಗತಿ ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಮಾಜಿಕ ಕಾರ್ಯಗಳನ್ನು ಆಯೋಜಿಸುವುದು ಸೇರಿದಂತೆ ಹಲವಾರು ಆಶಯಗಳನ್ನೊತ್ತು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದೇನೆ. ತಾಲೂಕಿನ ಬಹುತೇಕ ವಕೀಲ ಮಿತ್ರರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಪ್ರಕಾಶ್ ಹೇಳಿದರು.
ಹಿರಿಯ ವಕೀಲರಾದ ಕಿಟ್ಟಪ್ಪ ಲಕ್ಷ್ಮೀನಾರಾಯಣ, ಯುವ ವಕೀಲ ರಾಜಘಟ್ಟ ಕಾಂತರಾಜ್ ಸೇರಿದಂತೆ ಹಲವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.