ಆಯುರ್ವೇದ ಔಷದಿ ಯಿಂದ ಅರೋಗ್ಯ ವೃದ್ಧಿ…. ಚಂದ್ರ ಶೇಖರ್.

ದೊಡ್ಡಬಳ್ಳಾಪುರ:ಆಯುರ್ವೇದ ಔಷದಿ ಬಳಕೆಯಿಂದ ಅರೋಗ್ಯ ವೃದ್ಧಿಸಲಿದೆ ಇಂಗ್ಲಿಷ್ ಔಷದಿಗಳಿಂದ ತಾತ್ಕಾಲಿಕ ಶಮನ ಸಿಗಬಹುದು. ಆದರೆ ಆಯುರ್ವೇದ ಔಷದಿ ಯಿಂದ ದೀರ್ಘ ಕಾಲ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದಕ್ಕಾಗಿ ಸಾರ್ವಜನಿಕ ರಿಗೆ ಉಚಿತ ಆಯುರ್ವೇದ ತಪಾಸಣಾ ಶಿಬಿರವನ್ನು ನಮ್ಮ ಸಂಘಟನೆ ಯಿಂದ ಹಮ್ಮಿಕೊಳ್ಳಲಾಗಿದೆ ಎಂದು ರಕ್ಷಣಾ ವೇದಿಕೆ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಬಿ. ಎಸ್. ಚಂದ್ರಶೇಖರ ಹೇಳಿದರು.
ರಕ್ಷಣಾ ವೇದಿಕೆ ಕನ್ನಡಿಗರ ಬಣದಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಚಂದ್ರು, ಆಯುರ್ವೇದ ಔಷದಿ ಗಳು ಉಚಿತವಾಗಿ ಜನಸಾಮಾನ್ಯರಿಗೆ ತಲುಪುವ ಹಾಗೂ ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ದಿನಮಾನಗಳಲ್ಲಿ ತೀರಾ ಅಗತ್ಯ. ಹಾಗಾಗಿ ದಿ,21.11.2023ರಂದು ರಕ್ಷಣಾ ವೇದಿಕೆ ಮತ್ತು ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ ದೊಡ್ಡಬಳ್ಳಾಪುರ ಇವರ ಸಂಯುಕ್ತಆಶ್ರಯದಲ್ಲಿ ಕೆ. ಸಿ. ಜನರಲ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆಯುರ್ವೇದ ಅರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕನ್ನಡ ಜಾಗೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ರಕ್ತದ ಒತ್ತಡ, ಮದುಮೇಹ ತಪಾಸಣೆ, ಅಗ್ನಿಕರ್ಮ ಮತ್ತು ವಿದ್ದಕರ್ಮ ಚಿಕಿತ್ಸೆ, ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಹಾಗೂ ಉಚಿತ ತಪಾಸಣೆ ಮತ್ತು ಉಚಿತ ಔಷದಿ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಸಂದೀಗತ ರೋಗಗಳು, ಬೆನ್ನುನೋವು, ಮಂಡಿನೋವು, ಬೊಜ್ಜು, ಥೈರಾಡ್, ಗ್ಯಾಸ್ಟಿಕ್, ತಲೆಶುಲೇ, ಮೈಗ್ರೆನ್, ಅಲರ್ಜಿ, ಅಣಿ, ಅಸ್ತಮಾ, ನಿದ್ರಾ ಹೀನತೆ, ಪೌಷ್ಟಿಕ ಅಭಾವ, ತ್ವಚೆ ಗೆ ಸಂಬಂದಿಸಿದ ರೋಗಗಳ ಬಗ್ಗೆ ಉಚಿತ ತಪಾಸಣೆ ನಡೆಸಲಾಗುವುದು. ಇದರಲ್ಲಿ ಆಯುರ್ವೇದ ತಜ್ಞವೈದ್ಯರುಗಳು ಭಾಗವಹಿಸಲಿದ್ದಾರೆ. ವಿಶೇಷವಾಗಿ ರಕ್ತದಾನಿಗಳಿಗೆ ದಿ, ಪುನೀತ್ ರಾಜಕುಮಾರ್ ಸ್ಮರಣಾರ್ಥ ಗೌರವ ಪುರಸ್ಕಾರ ನೀಡಲಾಗುವುದು. ಮೇಲ್ಕಂಡ ಕಾಯಿಲೆಗೆ  ಸಂಬಂದ ಪಟ್ಟ ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಚಂದ್ರ ಶೇಖರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಾಜ್ಯ ಪ್ರ್ರದಾನ ಕಾರ್ಯದರ್ಶಿ ಆರ್. ರಮೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರವಿಂದ್, ತಾಲೂಕು ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ವಾಸು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಧಾ, ಮಂಜುಳಾ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.