ಬಿ.ವೈ.ವಿಜೇಯಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕ, ಮಗನಿಗೆ ಸಿಹಿ ತಿನಿಸಿ ಸಂಭ್ರಮಿಸಿದ ಬಿಎಸ್ವೈ.
ಬೆಂಗಳೂರು: ಬಿ.ವೈ.ವಿಜೇಯಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಸುದ್ದಿ ಕೇಳುತ್ತಿದ್ದ ಹಾಗೇ ತಮ್ಮ ಮಗನಿಗೆ ಮಾಜಿ ಸಿಎಂ ಬಿಎಸ್ವೈ ಯಡಿಯ್ಯೂರಪ್ಪನವರು ಸಿಹಿ ತಿನಿಸಿ ಸಂಭ್ರಮಿಸಿದರು.
ಈ ನಡುವೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಮಂದಿ ಸದ್ಯಸರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಕೂಡ ನಿರ್ಮಾಣವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆ ಕೂಡ ಬಿ.ವೈ.ವಿಜೇಯಂದ್ರ ಅವರ ನೇತೃತ್ವದಲ್ಲಿ ನಡೆಯುವುದರಲ್ಲಿ ಅನುಮಾನವಿಲ್ಲ. ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಲಿಂಗಾಯತರಿಗೆ ಸರಿಯಾದ ಸ್ಥಾನಮಾನವನ್ನು ನೀಡಲಿಲ್ಲ ಎನ್ನಲಾಗಿತ್ತು. ಒಂದ ಕಡೆ ಮಾಜಿ ಸಿಎಂ ಬಿಎಸ್ವೈ ಅವರು ಕೂಡ ಚುನಾವಣಾ ಪ್ರಚಾರದಲ್ಲಿ ಕೂಡ ಹೆಚ್ಚು ಕಾಣಿಸಿಕೊಳ್ಳಲಿಲ್ಲ ಎನ್ನಲಾಗುತ್ತಿದ್ದು, ಇದು ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ.