*ನೌಕರರಿಗೆ ಇ ಎಸ್ ಐ ಪಿಎಫ್ ಹಾಗೂ ಸರಿಯಾದ ಸವಲತ್ತು ನೀಡದ ಕಾಂತಿ ಏಜೆನ್ಸಿ:- ಯರಗಂಬಳ್ಳಿ ಪರಶಿವಮೂರ್ತಿ*

ಯಳಂದೂರು :-ತಾಲ್ಲೋಕಿನ ಪ್ರವಾಸಿ ಮಂದಿರದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷರಾದ ಯರಗಂಬಳ್ಳಿ ಪರಶಿವಮೂರ್ತಿ ರವರು ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯ ಅವ್ಯವಸ್ಥೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ. ನಿಗದಿತ ವೇತನ ಇಎಸ್ಐ ಪಿ ಎಫ್ ಮತ್ತಿತರ ಸೌಲಭ್ಯಗಳನ್ನು ಸರಿಯಾಗಿ ನೀಡದೆ ವಂಚಿಸುತ್ತಿದ್ದು ಇದರ ಬಗ್ಗೆ ತಾಲ್ಲೂಕು ಅಧಿಕಾರಿಗಳು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಹೇಳಿದರು. ಕಳೆದ 2022 ನೇ ಸಾಲಿನಿಂದ ಕಾಂತಿ ಏಜೆನ್ಸಿ ನೆಟ್ವರ್ಕ್ ಮೈಸೂರು ಇವರು ಹೊರಗುತ್ತಿಗೆ ನೌಕರರ ನೇಮಕಾತಿ ಟೆಂಡರ್ ಪಡೆದುಕೊಂಡಿದ್ದು ಇವರ ಅವಧಿಯಲ್ಲಿ ಇಲಾಖೆಯಿಂದ ಬಿಲ್ ಗಳನ್ನು ಪಡೆದುಕೊಂಡಿದ್ದು ನೌಕರರಿಗೆ ಸರಿಯಾಗಿ ನಿಗದಿತ ವೇತನ ಹಾಗೂ ಇಎಸ್ಐ ಪಿಎಫ್ ಮತ್ತಿತರ ಸೌಲಭ್ಯಗಳನ್ನು ಸಮರ್ಪಕವಾಗಿ ಪಾವತಿಸದಿರುವುದು ಹೊರಗುತ್ತಿಗೆ ನೌಕರರ ಬ್ಯಾಂಕ್ ಪಾಸ್ ಬುಕ್ ಮತ್ತು ಇತರೆ ದಾಖಲೆಗಳಪರಿಶೀಲನೆ ಯಿಂದ ಕಂಡುಬಂದಿರುತ್ತದೆ. ಇದು ಕಾರ್ಮಿಕ ಕಾನೂನು ಉಲ್ಲಂಘನೆ ಯಾಗಿದ್ದು ಸದರಿ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಠೇವಣಿ ಮಾಡಿರುವ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಅನ್ಯಾಯಕ್ಕೆ ಒಳಗಾಗಿರುವ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸೂಕ್ತ ಕಾನೂನು ಕ್ರಮ ವಹಿಸಬೇಕೆಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ವತಿಯಿಂದ ಒತ್ತಾಯಿಸಿದರು
ಈ ಸಂದರ್ಭದಲ್ಲಿ ರಾಜಣ್ಣ ಬೂದಿತಿಟ್ಟು. ಮಹೇಶ್ ಬದನಗುಪ್ಪೆ. ರೇವಣ್ಣ ಕಾವುದವಾಡಿ. ಮಹೇಶ್ ಬಣ್ಣಾರಿ. ಮರಪ್ಪ ಕೆಸ್ತೂರ್ ಇತರರು ಹಾಜರಿದ್ದರು.


ವರದಿ ಆರ್ ಉಮೇಶ್ ಮಲಾರಪಾಳ್ಯ.