*ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ರದ್ದುಗೊಳಿಸಿ:- ಕಂದಹಳ್ಳಿ ನಾರಾಯಣ್*

ಯಳಂದೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಚಾಮರಾಜನಗರ ಜಿಲ್ಲೆಯ ಜಿಲ್ಲಾ ಸಂಘಟನಾ ಸಂಚಾಲಕ ಕಂದಹಳ್ಳಿ ನಾರಾಯಣ್ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಂವಿಧಾನ ವಿರೋಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ರಾಜ್ಯ ಸರ್ಕಾರ ಈ ಶಿಕ್ಷಣ ನೀತಿಯನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ಜಿಲ್ಲಾ ಸಂಘಟನಾ ಸಂಚಾಲಕ ಕಂದಹಳ್ಳಿ ನಾರಾಯಣ್ ಒತ್ತಾಯಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ರೀತಿಯ ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ 1976 ರಲ್ಲಿ ಐ ಸಿ ಡಿ ಎಸ್. ಅಡಿಯಲ್ಲಿ ಜಾರಿಗೊಂಡ ಬಾಲ್ಯ ಪೂರ್ವ ಮಕ್ಕಳ ಆರೈಕೆ ಜಾಗತಿಕವಾಗಿ ಒಂದು ಮಾದರಿ ಯೋಜನೆಯಾಗಿದೆ ಆದರೆ ಎನ್ ಇ ಪಿ 2020ರ ನೀತಿ ಇದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಅಂಗನವಾಡಿಯನ್ನು ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯೊಳಗೆ ತರುವುದರ ಮೂಲಕ ಬಾಲ್ಯಪೂರ್ವ ಹಾರೈಕೆಗಳಾದ ಆಪೌಷ್ಟಿಕಾಂಶ ಆಹಾರ ನೀಡಿ ಆರೋಗ್ಯಕ್ಕೆ ಸಂಚಕಾರ ತರುತ್ತಿದ್ದಾರೆ ಅಂಗನವಾಡಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವ ಉನ್ನಾರ ಇದರಲ್ಲಿ ಅಡಗಿದೆ. ರಾಜ್ಯದಲ್ಲಿ ಎನ್ ಇ ಪಿ 2020 ಜಾರಿಯಾದರೆ ರಾಜ್ಯದಲ್ಲಿ 45,000 (ಸಾವಿರ )ಅಂಗನವಾಡಿ ಕೇಂದ್ರಗಳು ಮುಚ್ಚಲಿದೆ ಹಾಗೆಯೇ 45,000 ಅಂಗನವಾಡಿ ಸಹಾಯಕಿಯರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ. ಕೇಂದ್ರ ಸರ್ಕಾರ ಶಿಕ್ಷಣ ರಂಗದಲ್ಲಿ ಗುರುಕುಲ ಪದ್ಧತಿಯನ್ನು ಜಾರಿಗೆ ತರುವ ಮೂಲಕ 2000 ವರ್ಷಗಳ ಹಿಂದಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ.ಎಂದು ತಿಳಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕು ಸಂಚಾಲಕ ಶಂಕರ್ ಮೂರ್ತಿ ಹೊನ್ನೂರು. ಜಿಲ್ಲಾ ಸಮಿತಿ ಸದಸ್ಯರಾದ ಭಾಗ್ಯಲಕ್ಷ್ಮಿ. ತಾಲ್ಲೂಕು ಸಂಚಾಲಕಿ ರಾಜಮ್ಮ. ತಾಲ್ಲೂಕು ಸಂಘಟನಾ ಸಂಚಾಲಕಿ ಅಂಬಳೆ ಮಹಾದೇವಮ್ಮ. ಕಿನಕ ಹಳ್ಳಿ ಕೆಂಪಮ್ಮ. ಶಾಂತಮ್ಮ. ವೈ ಕೆ ಮೊಳೆ ನೀಲಯ್ಯ. ಮಣ್ಣೂರು ಮಹೇಶ್. ಕೋಮರನಪುರ ಕಾಂತರಾಜು. ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ವರದಿ ಉಮೇಶ್