ನಕಲಿ ವಿದ್ಯುತ್ ಗುತ್ತಿಗೆದಾರರ ಬಗ್ಗೆ ಎಚ್ಚರ… ಶಿವಶಂಕರ್

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಕಲಿ ಗುತ್ತಿಗೆದಾರರು ಹೆಚ್ಚಾಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರ ದಿಂದ ಇರಬೇಕೆಂದು ವಿದ್ಯುತ್ ಗುತ್ತಿಗೆ ದಾರ ರ ಸಂಘದ ಕಾರ್ಯಧ್ಯಕ್ಷ ಬಿ. ಶಿವಶಂಕರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆ ದಾರರ ಸಂಘದ ತಾಲೂಕು ಘಟಕದ ವತಿಯಿಂದ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಶಿವಶಂಕರ್ ತಾಲೂಕು ಮಟ್ಟದಲ್ಲಿ ಮಾನ್ಯತೆ ಪಡೆದ ಗುತ್ತಿಗೆದಾರರಿಗಿಂತ ಅನಧಿಕೃತ ಗುತ್ತಿಗೆ ದಾರರ ಹಾವಳಿ ಹೆಚ್ಚಾಗಿದ್ದು ವಿದ್ಯುತ್ ಗ್ರಾಹಕರು ಇವರಿಂದ ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ. ಗುತ್ತಿಗೆ ನೆಪದಲ್ಲಿ ಗ್ರಾಹಕರಿಂದ ದುಪ್ಪಟ್ಟು ಹಣ ಪಡೆದು ನಿಗದಿತ ವೇಳೆಗೆ ಸಂಪರ್ಕ ಕೊಡಿಸದೆ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಜೊತೆಗೆ ಸಂಪರ್ಕದ ವೇಳೆ ಐ. ಎಸ್. ಐ ಮಾರ್ಕ್ ಇಲ್ಲದ ನಕಲಿ ಪರಿಕರಗಳನ್ನು ಹಾಕಿ ವಿದ್ಯುತ್ ಅವಘಡಗಳಿಗೆ ಕಾರಣರಾಗುತ್ತಿದ್ದಾರೆ. ಈ ಬಗ್ಗೆ ಬೆಸ್ಕಾಂ ನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕೃತ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ನಕಲಿ ಗುತ್ತಿಗೆದಾರರ ನಿಯಂತ್ರಣಕ್ಕೆ ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ. ಇದಲ್ಲದೆ ವಿದ್ಯುತ್ ನಿಗಮಕ್ಕೆ ಸೇರಬೇಕಿದ್ದ ಸಾಕಷ್ಟು ಹಣ ನಕಲಿ ಗುತ್ತಿಗೆದಾರರ ಜೇಬು ಸೇರಿ ಇಲಾಖೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಶಿವಕುಮಾರ್ ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀಕುಮಾರ್ ಮಾತನಾಡಿ ಮದ್ಯ ವರ್ತಿಗಳ ಹಾವಳಿಯಿಂದ ಗ್ರಾಹಕರ ಸುಲಿಗೆಯಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕನ್ನು ಅಪಘಾತ ರಹಿತ ವಲಯವನ್ನು ಮಾಡುವುದು ಗ್ರಾಹಕರ ಜವಾಬ್ದಾರಿ. ವಿದ್ಯುತ್, ಉತ್ಪಾದನೆ, ಸಾಗಾಣಿಕೆ, ಕಳ್ಳತನ, ನಷ್ಟ ಇತ್ಯಾದಿಗಳ ಬಗ್ಗೆ ವಿದ್ಯುತ್ ಇಲಾಖೆ ಮುಂಜಾಗ್ರತೆ ವಹಿಸಬೇಕಿದೆ ಎಂದು ಕುಮಾರ್ ಹೇಳಿದರು.
ಇದೆ ವೇಳೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಘಟಕದ ಹೊಸ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಗೌರವಾಧ್ಯಕ್ಷ ಸಿ. ಬಸವರಾಜ್, ಅಧ್ಯಕ್ಷ ಲಕ್ಷ್ಮೀಕುಮಾರ್, ಕಾರ್ಯಧ್ಯಕ್ಷ ಬಿ. ಶಿವಶಂಕರ್, ಉಪಾಧ್ಯಕ್ಷ ಹೆಚ್. ವಿ. ರವಿಕುಮಾರ್ ನರಸಿಂಹಮೂರ್ತಿ, ಕಾರ್ಯದರ್ಶಿ ಬಿ. ಶಿವಕುಮಾರ್, ಜಂಟಿ ಕಾರ್ಯದರ್ಶಿ ವಿ. ಗೋಪಾಲಕೃಷ್ಣ, ಖಜಾಂಚಿ ಎಸ್. ದೀಪಕ್, ಸಂಘಟನಾ ಕಾರ್ಯದರ್ಶಿ ಆರ್. ನಾಗೇಶ್ ಮುಂತಾದವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.