ಬಿಲ್ ಪಾವತಿ ವಿಳಂಬ ನೀತಿಯಿಂದ ಗುತ್ತಿಗೆ ದಾರರು ಸಂಕಷ್ಟ ಅನುಭವಿಸುವಂತಾಗಿದೆ…. ಲಕ್ಸ್ಮಿಪತಿ.

ದೊಡ್ಡಬಳ್ಳಾಪುರ:ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಜಿಲ್ಲೆಗೆ 40ಕೋಟಿ ಬಿಡುಗಡೆ ಯಾಗಿದ್ದರು, ಬಿಲ್ ಪಡೆಯಲು ಗುತ್ತಿಗೆದಾರರು ಹರ ಸಾಹಸ ಮಾಡಬೇಕಾಗಿದೆ. ಬಿಲ್ ಪಾವತಿಗೆ ಇರುವ ಹಂತಗಳನ್ನು ಸರಳಿಕೃತ ಗೊಳಿಸಬೇಕಿದೆ ಎಂದು ಸಿವಿಲ್ ರಾಜ್ಯ ಸಿವಿಲ್ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ಜಿ. ಲಕ್ಸ್ಮಿಪತಿ ಹೇಳಿದ್ದಾರೆ.
ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರವಾಸಿಮಂದಿರದಲ್ಲಿ ನಡೆಸಲಾದ ಪತ್ರಿಕಾಗೋಷ್ಟಿಯಲ್ಲಿ ಲಕ್ಷ್ಮೀಪತಿ ಮಾತನಾಡಿ ಕಾಮಗಾರಿಗಳು ಮುಗಿದ ನಂತರ ಕಾಮಗಾರಿ ಗುಣ ಮಟ್ಟ ಕುರಿತಂತೆ ಮೂರನೇ ವ್ಯಕ್ತಿ ಪರಿಶೀಲನೆ ನಂತರ ತಾಲೂಕು ಹಂತದಲ್ಲೇ ಬಿಲ್ ಪಾವತಿಗಳು ನಡೆಯುತ್ತಿದ್ದವು. ಆದರೆ ಈಗ ಕೆಲಸ ಮುಗಿದ ನಂತರ ಎಲ್ಲಾ ರೀತಿ ಪರಿಶೀಲನೆ ಮುಕ್ತಾಯವಾದರೂ ಇಲಾಖೆಯ ಹಿರಿಯ ಅಧಿಕಾರಿಗಳ ಸಹಿಗೆ ತಿಂಗಳು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳ ಈ ವಿಳಂಬ ನೀತಿಗೆ ಗುತ್ತಿಗೆ ದಾರರು ಸಾಲಗಾರ ರಾಗುವಂತಾಗಿದೆ ಇತ್ತೀಚೆಗೆ ತಾಲೂಕು ಹಂತದ ಅಧಿಕಾರಿಗಳು ಕಚೇರಿಗಳಲ್ಲಿ ಸಿಗುವುದೇ ದುಸ್ತರ ವಾಗಿದೆ. ಕಚೇರಿಗಳಲ್ಲಿ ಇವರ ಅನುಪಸ್ಥಿತಿ ಸಹ ಬಿಲ್ ಪಾವತಿ, ಕಾಮಗರಿಗಳ ಪರಿಶೀಲನೆಗೆ ದೊಡ್ಡ ಅಡ್ಡಿಯಾಗಿದೆ. ಎಂದ ಲಕ್ಷ್ಮೀಪತಿ ಗುತ್ತಿಗೆ ದಾರರಿಗೆ ಬಿಲ್ ಪಾವತಿ ಸುವ ಸಂದರ್ಭದಲ್ಲಿ g. S. T. ಸೇರಿದಂತೆ ಎಲ್ಲಾ ರೀತಿಯ ತೆರಿಗೆಗಳನ್ನು ಕಡಿತ ಮಾಡಿ ನಂತರವೇ ಆನ್ಲೈನ್ ಮೂಲಕ ಕಾಮಗಾರಿಯ ಹಣ ಗುತ್ತಿಗೆದಾರನಿಗೆ ಪಾವತಿಯಾಗುತ್ತದೆ.
2017ರಿಂದ ಇಲ್ಲಿಯವರೆಗೆ ಕಡಿತ ಮಾಡಿರುವ ಲಕ್ಷಾಂತರ g. S. T. ಹಣ ಗುತ್ತಿಗೆದಾರನಿಗೆ ಪವತಿಯಾಗಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಇತ್ತೀಚಿಗೆ ವಾಣಿಜ್ಯ ತೆರಿಗೆ ಇಲಾಖೆ, g. S. T ಇಲಾಖೆ ಗಳಿಂದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ. ಮೊದಲೇ ಹಣ ಪಾವತಿ ಮಾಡಿದ್ದರು ಸಹ ನೋಟಿಸ್ಗಳು ಬರುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ.
ಟೆಂಡರ್ ಪ್ರಕ್ರಿಯೆ ನಂತರ ಗುತ್ತಿಗೆ ದಾರ ಕಾರ್ಯದೇಶ ಪಡೆದು ಕಾಮಗಾರಿ ಪ್ರಾರಂಭಿಸಲು ಸ್ಥಳೀಯ ಜನ ಪ್ರತಿನಿದಿಗಳ  ಆದೇಶದವರೆಗೂ ಕಾಯಬೇಕು. ಇದರಿಂದ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸುವುದು ಕಷ್ಟವಾಗಿದೆ. ಕಾರ್ಯದೇಶ ನೀಡುತ್ತಿದ್ದಂತೆ ಕೆಲಸ ಪ್ರಾರಂಭಿಸಿದರೆ ಆರ್ಥಿಕ ವರ್ಷ ಕೊನೆಗೂಳ್ಳುವ ಮುನ್ನ ಕೆಲಸ ಮುಗಿಸಲು ಅನುಕೂಲ ಆಗುತ್ತದೆ ಎಂದು ಲಕ್ಷ್ಮೀಪತಿ ಹೇಳಿದರು.
ಗುತ್ತಿಗೆದಾರರ ಸಂಘದ ತಾಲೂಕು ಉಪಾಧ್ಯಕ್ಷ ಬಚ್ಛೆಗೌಡ, ಕಾರ್ಯದರ್ಶಿ ಲಕ್ಸ್ಮಿಕಾಂತ್, ಖಜಾಂಚಿ ಚಂದ್ರಣ್ಣ, ದೇವನಹಳ್ಳಿ ತಾಲೂಕ ಅಧ್ಯಕ್ಷ ಸುಬ್ರಮಣಿ, ನೆಲಮಂಗಲ ಅಧ್ಯಕ್ಷ ಪವನ್ ಕುಮಾರ್, ಹೊಸಕೋಟೆ ಅಧ್ಯಕ್ಷ ಕೇಶವಮೂರ್ತಿ, ಗುತ್ತಿಗೆದಾರರದ ಕೇಶವ, ನಾರನಹಳ್ಳಿ ಕೆಂಪೇಗೌಡ, ಅರುಡಿ ಹರೀಶ ಮೊದಲದವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.