ತ್ಯಾಜ್ಯವಿಲೇವಾರಿ ಘಟಕ ಉದ್ಘಾಟನೆ ಮಾಡಿದ ಶಾಸಕ ಎ ಆರ್ ಕೃಷ್ಣಮೂರ್ತಿ

ಯಳಂದೂರು: ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡವನ್ನು ಶಾಸಕ ಎ.ಆರ್ ಕೃಷ್ಣಮೂರ್ತಿ ರವರು ಉದ್ಘಾಟಿಸಿದರು.

ಈ ಘಟಕದಲ್ಲಿ ನಿಮ್ಮ ಮನೆಯ ಕಸವನ್ನು ನೀವೆ ಹಸಿಕಸ ಮತ್ತು ಒಣಕಸ ಎಂದು ವಿಂಗಡಿಸುವುದಕ್ಕಾಗಿಯೇ ಒಂದು ಮನೆಗೆ ಎರಡು ಬಕೇಟ್ ನೀಡಲಾಗಿದೆ ಹಸಿರು ಮತ್ತು ನೀಲಿ ಬಕೇಟ್ ಗಳನ್ನು ನೀಡಲಾಗಿದ್ದು ಕಸವನ್ನು ವಿಂಗಡಿಸಿ ನೀಡಬೇಕಾಗುತ್ತದೆ ಎಂದರು

ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕಸವನ್ನು ಸಂಗ್ರಹಿಸಿ ಈ ಘಟಕಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು

ಕಟ್ಟಡವನ್ನು ಕೆ ಆರ್ ಐ ಡಿ ಲ್ ವಿಭಾಗವು ಅಂಬಳೆ ಗ್ರಾಮದ ಹೊರವಲಯದಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ವ್ಯಚ್ಚದಲ್ಲಿ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಎಂದು ಸಹಾಯಕ ಇಂಜಿನಿಯರ್ ಚಿಕ್ಕಲಿಂಗಯ್ಯ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡಸ್ವಾಮಿ,ಉಪಾಧ್ಯಕ್ಷೆ ಮಹದೇವಮ್ಮ, ಪಿಡಿಒ ಮಮತ, ಬಿಲ್ ಕಲೆಕ್ಟರ್ ಪುಟ್ಟರಾಜು, ಗ್ರಾಮ ಪಂಚಾಯಿತಿಯ ಸದಸ್ಯರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ