ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಯಳಂದೂರು: ಪಟ್ಟಣದ ಬಳೇಪೇಟೆ ಬಡಾವಣೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2022- 23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಡಾ.ಅಂಬೇಡ್ಕರ್ ಭವನದಲ್ಲಿ ನೆರವೇರಿತು.
ಸಭೆಯಲ್ಲಿ ಸಂಘದ ವ್ಯವಹಾರದ ಲೆಕ್ಕಚಾರ ಮಂಡಿಸಿದ ಡಿ.ಪಿ ರವಿಕುಮಾರ್ ಸಂಘವು 5ಲಕ್ಷದ 20 ಸಾವಿರರೂಗಳ ಲಾಭಾಂಶವನ್ನು ಪಡೆದಿದೆ ಎಂದರು.
ಸಂಘದಿಂದ ರೈತರಿಗೆ ಪಶು ಸಂಗೋಪಾನೆಗಾಗಿ ಸಾಲವನ್ನು ಶೂನ್ಯ ಬಡ್ಡಿಧರದಲ್ಲಿ ನೀಡಲಾಗಿದೆ ಎಂದರು. ಕೃಷಿಮಾಡುವ ಸದಸ್ಯರೈತರ ಅಬಿವೃದ್ದಿಗಾಗಿ ಸಂಘವು ಹಲವು ರೀತಿಯಲ್ಲಿ ಸಹಕಾರ ನೀಡುತ್ತಬಂದಿದ್ದು ರೈತರಿಗಾಗಿ ಹಲವು ಬಗೆಯ ಸಾಲ ಸೌಲಭ್ಯವನ್ನು ಸಂಘದಿಂದ ನೀಡಲಾಗಿದೆ ಎಂದರು.
ಸಂಘದಿಂದ ಮಧ್ಯಮಾವದಿ ಸಾಲ, ಪಿಗ್ಮಿ ಸಾಲ, ಸ್ವಸಹಾಯ ಸಂಘಗಳ ಸಾಲ, ಬೆಳೆಸಾಲ, ಮುಂತಾದ ಚಟುವಟಿಕೆಗಳ ಮೂಲಕ ಸಂಘವು ವ್ಯವಹರಿಸುತ್ತ ಬಂದಿದ್ದು ಬಡಜನರ ಹಾಗೂ ಅರ್ಥಿಕವಾಗಿ ದುರ್ಬಲರಾಗಿರು ಜನರ ಅರ್ಥಕತೆಯನ್ನು ಉತ್ತಮವಾಗಿ ಪಡಿಸಲು ಸಹಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನಸ್ವಾಮಿ, ಉಪಾದ್ಯಕ್ಷರಾದ ಬಾಬುಸ್ವಾಮಿ, ನಿರ್ದೇಶಕರಾದ ನಂಜಶೆಟ್ಟಿ, ಪಿ ಮಾದೇಶ, ರವಿ, ನಿಂಗರಾಜು, ಅನಿಲ್, ಜಯರಾಮು, ಮಹೇಶ್, ರಾಜಶೇಖರ್, ರಾಜಮ್ಮ,ಪುಟ್ಟಚಾಮಮ್ಮ ಲಿಂಗರಾಜು ಸಂಘದ ಮುಖ್ಯ ಕಾರ್ಯನಿರ್ಹಣಾಧಿಕಾರಿ ಪುಟ್ಟರಾಜು ಹಾಗೂ ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ ಆರ್ ಉಮೇಶ್