ಕಾವೇರಿ ನಿರ್ವಹಣಾ ಪ್ರಾಧಿಕಾರದ ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಕ ರ ವೇ ನಾರಾಯಣ ಗೌಡರ ಬಣದಿಂದ ಪ್ರತಿಭಟನೆ.

ದೊಡ್ಡಬಳ್ಳಾಪುರ: ತಮಿಳುನಾಡಿಗೆ ದಿನ ನಿತ್ಯ 5000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾದಿಕಾರದ ಆದೇಶವನ್ನು ಖಂಡಿಸಿ,ಹಾಗೂ ಪ್ರಾದಿಕಾರದ ಆದೇಶವನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್  ನಿರ್ದೇಶನಕ್ಕೆ ಅಸಮಾಧಾನ ವ್ಯಕ್ತಪಡಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದಿಂದ ತಾಲ್ಲೋಕು ಕಛೇರಿ ಸರ್ಕಲ್‌ ನಲ್ಲಿ ಪ್ರಾದಿಕಾರದ ಪ್ರತಿಕ್ರುತಿ ದಹಿಸುವ ಮೂಲಕ ಪ್ರತಿಭಟನೆ ನೆಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ದೊಡ್ಡಬಳ್ಳಾಪುರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಅದ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವೈಪಲ್ಯದಿಂದ ಕಾವೇರಿ ಕೊಳ್ಳದ ರಾಜ್ಯ ರೈತರಿಗೆ ಘೋರ ಅನ್ಯಾಯವಾಗಿದೆ.
ಕಾವೇರಿ ನಿರ್ವಹಣಾ ಪ್ರಾದಿಕಾರ ತಮಿಳುನಾಡಿನ ಅಣತಿಯಂತೆ ದಿನ ನಿತ್ಯ ,5000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶಿಸಿದೆ. ಜೊತೆಗೆ ಸುಪ್ರೀಂಕೋರ್ಟ್ ಕೂಡ ಪ್ರಾದಿಕಾರದ ಆದೇಶನ್ನು ಎತ್ತಿ ಹಿಡಿದು ತಮಿಳುನಾಡಿಗೆ ನೀರು ಒದಗಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದೆ ಇದರಿಂದ ರಾಜ್ಯಕ್ಕೆ ಹಾಗು ರೈತರಿಗೆ ಸಾಕಷ್ಟು ತೊಂದರೆಯಾಗಿದೆ.
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಮಳೆಯ ಅವಕ್ರುಪೆಯಿಂದಾಗಿ ನೀರಿಲ್ಲದೆ ಜಲಾಶಯಗಳು ಬರಿದಾಗಿದೆ.ಇದರಿಂದ ಬೆಂಗಳೂರು ನಗರ ಸೇರಿದಂತೆ ನಾಲ್ಕೈದು ಜಿಲ್ಲೆಗಳಿಗೆ ಕುಡಿಯಲು ಸಹ ನೀರಿಲ್ಲದಂತಾಗಿದೆ.ತಮಿಳುನಾಡಿನ ರೈತರು ಮಳೆ ಇಲ್ಲದ ಸಂದರ್ಭದಲ್ಲಿಯು ವಾರ್ಷಿಕ ‌ಮೂರು ಬೆಳೆ ಬೆಳೆಯುತ್ತಿದ್ದಾರೆ. ಆದರೆ ರಾಜ್ಯದ ರೈತರು ಒಂದು ಬೆಳೆ ಬೆಳೆಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಪ್ರಾದಿಕಾರ ನೀಡಿದ ಆದೇಶ ರಾಜ್ಯಕ್ಕೆ ಮಾರಕವಾಗಿದೆ.ಈ ವಿಚಾರದ ವಾಸ್ತವ ವಿವರಗಳನ್ನು ಪ್ರಾದಿಕಾರಕ್ಕೆ ಹಾಗೂ ಸುಪ್ರೀಂಕೋರ್ಟ್ ಗೆ ಅರ್ಥೈಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.ರಾಜ್ಯದ ರೈತರಿಗೆ ಆದ ಅನ್ಯಾಯವನ್ನು ಕ ರ ವೇ ಉಘ್ರವಾಗಿ ಖಂಡಿಸುತ್ತದೆ.ಜೊತೆಗೆ ರಾಜ್ಯದ ರೈತರ ಪರವಾಗಿ ಅನಿರ್ದಿಷ್ಟ ಹೋರಾಟಕ್ಕು ಕೈ ಜೋಡಿಸಲಿದೆ ಎಂದು ತಾಲ್ಲೂಕು ಅದ್ಯಕ್ಷ ವಿ.ಪುರುಷೋತ್ತಮಗೌಡ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ತು ಕಾವೇರಿ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತದ ಸಂಸದರ ವಿರುದ್ದ ಘೋಷಣೆ ಗಳನ್ನು ಕೂಗಿ ಕಾವೇರಿ ನಿರ್ವಹಣಾ ಪ್ರಾದಿಕಾರದ ಪ್ರತಿಕ್ರುತಿಯನ್ಮು ಪ್ರತಿಭಟನಾಕಾರರು ದಹನ ಮಾಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಅದ್ಯಕ್ಷ ಪುರುಷೋತ್ತಮ ಗೌಡ ಕಾರ್ಮಿಕ ಘಟಕದ ಅದ್ಯಕ್ಷ ಶ್ರೀನಿವಾಸ್ ಮಹಿಳಾ ಮುಖುಂಡರಾದ ಗೀತಾ ಸೇರಿದಂತೆ ಹಲವಾರು ರಕ್ಷಣಾ ವೇದಿಕೆಯ ಕಾರ್ಯಕರ್ತರು ಬಾಗವಹಿಸಿದ್ದರು.