ಯಳಂದೂರು: ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ 2022/23ರ ಸಾಲಿನ ಆಯವ್ಯಯವನ್ನು ಮಂಡಿಸಲಾಯಿತು ಸಂಘದ ಅಧ್ಯಕ್ಷರಾದ ಮಾಜಿ ಶಾಸಕ ಎಸ್ ಬಾಲರಾಜ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ನಮ್ಮ ಸಂಘದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಸಮರ್ಪಕವಾಗಿ ಪಡಿತರ ಸರಬರಾಜು ಮಾಡಲಾಗುತ್ತಿದೆ ಸಂಘವನ್ನು ಸಂಪೂರ್ಣವಾಗಿ ಆಡಿಟ್ ಮಾಡಲಾಗಿದೆ ಸಂಘದಲ್ಲಿ ನಿರ್ದೇಶಕರಾಗಲಿ ಸಂಘದ ಸದಸ್ಯರುಗಳಗಾಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು ನಂತರ ವಾರ್ಷಿಕ ಮಹಾಸಭೆಯ ನಡುವಳಿಯನ್ನು ಓದಿ ರೆಕಾರ್ಡ್ ಮಾಡಲಾಯಿತು 2021/22ರ ಸಾಲಿನ ಆಡಿಟ್ ಆದ ಆಸ್ತಿ ಜವಾಬ್ದಾರಿ ಜಮಾ ಖರ್ಚುಗಳನ್ನು ಪರಿಶೀಲನೆ ಮಾಡಿ ಅಂಗೀಕರಿಸಲಾಯಿತು ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಕುಸುಮರಾಜ್ . ನಿರ್ದೇಶಕರಾದ ನಂಜಶೇಟ್ಟಿ.ಬಸವರಾಜು.ಶಿವಶೇಖರ್.ಮಹೇಶ್ ಕುಮಾರ್.ಪ್ರತಾಪ್.ನಾಗರಾಜು.ಪುಟ್ಟರಾಜು.ಮಹದೇಶ್ . ಅಂಬಿಕಾ.ರಾಜಮ್ಮ.ಜಯರಾಮು.ಮಾದೇಶ್ ಹಾಗೂ ಸಂಘದ ಸಿಬ್ಬಂದಿ ವರ್ಗ ರಮೇಶ್.ಮಹೇಶ್.ರಾಜಶೇಖರ್.ಶಶಿಕುಮಾರ್ ಹಾಗೂ ಸಂಘದ ಸದಸ್ಯರು ಮುಖಂಡರು ಮುಂತಾದವರು ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್