ಯಳಂದೂರು: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಬಣ್ಣದ ಗಣಪಣ ಬಿಡಿ ಮಣ್ಣಿನ ಗಣಪಣ ಇಡಿ ಎಂಬ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೀಧರ್ ರವರು ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ ನಾವು ಪ್ರಕೃತಿಯ ಸಂಪತ್ತನ್ನು ಮಾಲಿನ್ಯ ಮಾಡದೆ ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಕೊಂಡೋಯ್ಯಬೇಕಾಗಿದೆ ಅದ್ದರಿಂದ ಹಲವು ರಸಾಯನಿಕಯುಕ್ತ ಬಣ್ಣದ ಗಣಪನ ಮರೆತು ತಾಜಾ ಮಣ್ಣಿನ ಗಣಪನನ್ನು ಪೂಜಿಸಿ ವಿಸರ್ಜಿಸೋಣ ಈ ಮೂಲಕ ಆರೋಗ್ಯವಂತ ಕೆರೆ ಕಟ್ಟೆ ನದಿ ಸಮುದ್ರವನ್ನು ನಿರ್ಮಿಸೋಣ ಎಂದರು .
ಪ್ರಕೃತಿ ಸಂಪತ್ತಿನೊಡನೆ ಮಾನವನು ಬುದ್ದ ಹೇಳಿದ ಮೈತ್ರಿಯನ್ನು ಅನುಸರಿಸಬೇಕಾಗಿದೆ ಈ ಮೂಲಕ ಪಾಕೃತಿಕವಾದ ಸಕಲ ಜೀವರಾಶಿಗಳಿಗೂ ಅನುಕೂಲವಾಗಬೇಕು ಎಂದರು
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ನಂಜುಂಡಯ್ಯ ರವರು ಮಾತನಾಡಿ ಮಾನವ ಪ್ರಪಂಚದಲ್ಲಿ ಹಬ್ಬ ಹರಿದಿನಗಳು ಸಂತೋಷ ಸಡಗರದ ಹಬ್ಬಗಳಾಗಿದ್ದು ಅಂದಿನ ಕಾಲದಲ್ಲಿ ನೈಸರ್ಗಿಕವಾಗಿ ದೊರೆಯುವ ಕೆರೆ ಕಟ್ಟೆಯ ಮಣ್ಣಿನಲ್ಲಿ ಹಾಗೂ ಕಲ್ಲಿನಲ್ಲಿ ದೇವರ ಮೂರ್ತಿಗಳನ್ನು ರೂಪಿಸಿ ಪೂಜಿಸುತ್ತಿದ್ದರು ಎಂದು ತಿಳಿಸಿದರು .
ಹಾಗೆಯೇ ಬಣ್ಣದ ಗಣಪಣ ಬಿಡಿ ಮಣ್ಣಿನ ಗಣಪಣ ಇಡಿ ಜಾಗೃತಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಎನ್ ನಾಗರಾಜು ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ರಾಸಾಯನಿಕ ಯುಕ್ತ ಬಣ್ಣಗಳಿಂದ ಅಲಂಕರಿಸಿ ಹಾಗೂ ಪಿ ಒ ಪಿ ವಸ್ತುವಿನಿಂದ ತಯಾರಿಸಿದ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ನಂತರದ ದಿನಗಳಲ್ಲಿ ಈ ಮೂರ್ತಿಗಳನ್ನು ಕೆರೆ ಕಟ್ಟೆ ನದಿಗಳಲ್ಲಿ ವಿಸರ್ಜನೆ ಮಾಡುವುದು ಜಲಮಾಲಿನ್ಯವಾಗಿ ಜಲಚರ ಜೀವಿಗಳ ಪ್ರಾಣಕ್ಕೆ ಬಹಳ ತೊಂದರೆ ಉಂಟಾಗುತ್ತದೆ ಇದಲ್ಲದೆ ಹಳ್ಳಿಗಳಲ್ಲಿರುವ ಕೆರೆ ಕಟ್ಟೆ ನೀರನ್ನು ಹಸು ಎಮ್ಮೆ.ಕುರಿ ಮುಂತಾದ ಜಾನುವಾರುಗಳು ಕುಡಿಯುವುದರಿಂದ ಪ್ರಾಣಿ ಪಕ್ಷಿಗಳ ಪ್ರಾಣಕ್ಕೂ ಕೂಡ ತುಂಬಾ ತೊಂದರೆಯಾಗುತ್ತಿದೆ ಎಂದರು
ಬಣ್ಣಗಳು ರಸಾಯನಿಕಯುಕ್ತವಾಗಿದ್ದು ನೀರಿನಲ್ಲಿ ಬೆರೆಯುತ್ತಿದ್ದಂತೆ ಆ ಬಣ್ಣದ ರಸಾಯನಿಕವು ನೀರಿಗೆ ಪಸರಿಸಿ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. ನೀರಲ್ಲಿರುವ ಸೋಕ್ಷ್ಮ ಜೀವಿಗಳಿಂದ ದೊಡ್ಡ ಜಿವಿಗಳಿಗೂ ಮಾರಕವಾದ ರೋಗವನ್ನು ತಂದೊಡ್ಡುತ್ತದೆ
ಆದ್ದರಿಂದ ನಾವು ನೀವು ಎಲ್ಲರೂ ಸೇರಿ ಬಣ್ಣದ ಗಣಪಣನ್ನು ತೊರೆದು , ಪೂರ್ವಜರು ಅನುಸರಿಸುತ್ತಿದ್ದ ನೈಸರ್ಗಿಕವಾದ ಮಣ್ಣಿನ ಗಣಪಣನನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜನೆ ಮಾಡೋಣ ಎಂದು ತಿಳಿಸಿದರು
ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಜಯ್ , ಡಿ ಎಸ್ ಎಸ್ ರಾಜಣ್ಣ. ಡಿ ಎಸ್ ಎಸ್ ಚಂದ್ರುಶೇಖರ್. ಕ ಸಾ ಪ ಅಧ್ಯಕ್ಷ ನಾಗೇಂದ್ರ ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ನೌಕರರ ಸಂಘದ ಅಧ್ಯಕ್ಷ ವೈ ಎಂ ಮಂಜುನಾಥ , ಕಲಾವಿದ ಮೂರ್ತಿ, ಕನ್ನಡ ಶಿಕ್ಷಕ ಪುಟ್ಟಸ್ವಾಮಿ, ಹಾಗೂ ಪಬ್ಲಿಕ್ ಶಾಲೆಯ ಶಿಕ್ಷಕ ವೃಂದದವರು ಕಾಲೇಜು ಶಿಕ್ಷಕ ವೃಂದದವರು ಹಾಗೂ ಯಳಂದೂರು ತಾಲ್ಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ಆರ್ ಉಮೇಶ್