ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹಾದು ಹೋಗುವ ರಸ್ತೆಯ ಮೆಟ್ಟಿಲು ರೈಲಿಂಗ್ ಕಾಮಗಾರಿಗೆ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಆರ್ ಕೃಷ್ಣ ಮೂರ್ತಿ ರವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 4 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯನ್ನು ನಡೆಸಲಾಗುವುದು 27ಸೇಟ್ಸ್ ಒಳಗೊಂಡ 5.90ಅಗಲ 185ಉದ್ದದ ಎಂ ಎಂ ಕಪ್ಪಾದ ಕಲ್ಲಿನ 300ಹಂತಗಳು ಎರಡು ಬದಿ ಎಸ್ ಎಸ್ ರೈಲಿಂಗ್ ಹಾಗೂ ಕಲ್ಯಾಣ ಕೊಳಕ್ಕೆ ಹಾದು ಹೋಗುವ ರಸ್ತೆಗೆ ಸಿಮೆಂಟ್ ಕಾಂಕ್ರಿಟ್ ರಸ್ತೆ ಮಾಡಲಾಗುವುದು ಎಂದು ತಿಳಿಸಿದರು ಮೂಲಭೂತ ಸೌಕರ್ಯಗಳಾದ ಸುದ್ದ ಕುಡಿಯುವ ನೀರಿಗೆ ದೊಡ್ಡ ಟ್ಯಾಂಕ್ ನಿರ್ಮಾಣ ಬಸ್ ನಿಲ್ದಾಣಕ್ಕೆ ಸೂಕ್ತ ಸ್ಥಳ ನಿರ್ಮಿಸಿ ನಿಲ್ದಾಣದಲ್ಲಿ ಹೈ ಮಾಸ್ಕ್ ದೀಪ ಅಳವಡಿಸಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಂಜುಳಾ ಕೃಷ್ಣ ಮೂರ್ತಿ.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್.ಉಪದ್ಯಾಕ್ಷೆ ಕಮಲಮ್ಮ ಈ ಓ ಮೋಹನ್ ಕುಮಾರ್ ಮುಖಂಡರಾದ ಜಿ ಯೋಗೇಶ್.ತೊಟೇಶ್.ಕೇತಮ್ಮ.ಚಂದ್ರು.ದಾಸ್.ವೆಂಕಟೇಶ್.ಶಿವು.ರಾಜೇಶ್.ಮಹೇಶ್ ಚೇತನ್ ಹಾಗೂ ಬಿಳಿಗಿರಿ ರಂಗನ ಬೆಟ್ಟದ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕರ್ತರು ದೇವಸ್ಥಾನದ ಆಡಳಿತ ಮಂಡಳಿಯವರು ಹಾಜರಿದ್ದರು. . .
ವರದಿ ಆರ್ ಉಮೇಶ್