ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳ ಬೆವರಿಳಿಸಿದ ಶಾಸಕ ಎ.ಆರ್ ಕೃಷ್ಣಮೂರ್ತಿ:
ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿಂದು ಸಾಮಾನ್ಯ ಸಭೆಯು ನಡೆದಿದ್ದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಎ.ಆರ್ ಕೃಷ್ಣಮೂರ್ತಿ ಯವರು. ಸಾರ್ವಜನಿಕರ ಕೆಲಸಕಾರ್ಯಗಳು ತ್ವರಿತವಾಗಿ ಆಗಬೇಕು ಯಾವುದೇ ಸಬೂಬು ಹೇಳದೆ ಕಾನೂನಿನಡಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಮಹೇಶ್ ಹಾಗೂ ರಂಗನಾಥ್ ಮಾತನಾಡಿ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳಾದ ಇಸ್ವತ್ತು, ಖಾತೆ ಬದಲಾವಣೆ, ಹಾಗೂ ಕರ ವಸೂಲಾತಿ ಮುಂತಾದ ಕೆಲಸಕಾರ್ಯಗಳನ್ನು ಮಾಡುತ್ತಿಲ್ಲ. ಸಾರ್ವಜನಿಕರನ್ನು ಕಛೇರಿಗೆ ಅನಾವಶ್ಯಕವಾಗಿ ಅಲೆಸುತ್ತಾರೆ ಎಂದು ಅಧಿಕಾರಿಗಳ ವಿರುದ್ದ ಆರೋಪಗಳ ಸುರಿಮಳೆಯನ್ನು ಮಾಡಿದರು.
ಪಂಚಾಯಿತಿಯ ಸಹಯೋಗದಲ್ಲಿ ನಡೆಯುವ ಹಲವು ಜಾಗೃತಿ ಕಾರ್ಯಕ್ರಮಗಳ ಹೆಸರಲ್ಲಿ ಸುಳ್ಳು ಸುಳ್ಳು ಬಿಲ್ಲ ಬರೆದು ಗೋಲ್ಮಾಲ್ ಮಾಡಿ ಹಣವನ್ನು ಗುಳುಂ ಮಾಡುತ್ತಿದ್ದಾರೆ ಎಂದು ಸದಸ್ಯರಾದ ರಂಗನಾಥ್ ದಾಖಲಾತಿಗಳ ಸಮೇತ ಶಾಸಕರಿಗೆ ತೋರಿಸಿ ಆರೋಪ ಮಾಡಿದರು.
ಸಭೆಯಲ್ಲಿ ಸಮಸ್ಯೆ ಮತ್ತು ಗೋಲ್ಮಾಲ್ ವಿಷಯಗಳೆ ಹೆಚ್ಚು ಮುನ್ನಲೆಯ ವಿಷಯವಾಗಿ ಚರ್ಚೆಗೆ ಬಂದಿದ್ದು ಪಟ್ಟಣ ಪಂಚಾಯಿತಿಯು ಹಲವು ಸಮಸ್ಯೆಗಳ ಹಾಗೂ ಗೋಲ್ಮಾಲ್ ಗಳ ಆಗರವಾಗಿದೆ ಎಂಬುದಕ್ಕೆ ಈ ಸಭೆಯಲ್ಲಿ ಚರ್ಚೆ ನಡೆದ ವಿಷಯಗಳೆ ಮೂಕಸಾಕ್ಷಿಯಾಗಿದ್ದವು.
ನಂತರ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಹೊಸ ಒವರ್ ಹೆಡ್ ಟ್ಯಾಂಕ್ ನಿರ್ಮಿಸಲು ಸೂಕ್ತ ಸ್ಥಳ, ಪತ್ರಕರ್ತರ ಭವನ, ಗುರುಭವನ,ಗಳಿಗೆ ಸ್ಥಳ ಪರಿಶೀಲನೆ ಮಾಡಿ ಎಂದು ಮೌಖಿಕವಾಗಿ ಶಾಸಕರು ಅಧಿಕಾರಿಗಳಿಗೆ ಹೇಳಿದರು.
ವಾಟರ್ ಮ್ಯಾನ್ ಮತ್ತು ಪೌರಕಾರ್ಮಿಕರಿಗೆ ತುಂಬಾ ತಿಂಗಳಿಂದ ಸಂಬಳ ನೀಡಿಲ್ಲವೆಂದರೆ ಅವರು ಜೀವನ ನಡೆಯುವುದಾದರು ಹೇಗೆ ತ್ವರಿತವಾಗಿ ಅವರಿಗೆ ಸಂಬಳನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು
ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಪ್ರಭಾರ ಮುಖ್ಯಾಧಿಕಾರಿ ಮಹೇಶ್ ಕುಮಾರ್, ತಹಶಿಲ್ದಾರ್ ಜಯಪ್ರಕಾಶ್ ಪಟ್ಟಣ ಪಂಚಾಯಿತಿಯ ಚುನಾಯಿತ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದರು. .
ವರದಿ ಆರ್ ಉಮೇಶ್