ಮೂಲಸೌಕರ್ಯವಿಲ್ಲದೆ ನಡೆದ ಕ್ರೀಡಾಕೂಟ
ಸಂತೇಮರಹಳ್ಳಿ:
ಚಾಮರಾಜನಗರ ತಾಲೂಕಿನ ಪ್ರೌಡಶಾಲಾ ವಿಭಾಗದ ಕ್ರೀಡಾಕೂಟವು ಮೂಲಸೌಕರ್ಯವಿಲ್ಲದೆ ನಡೆಯುತ್ತಿರುವ ಕ್ರೀಡಾಕೂಟವು ಇದಾಗಿದೆ
ಸಂತೇಮರಳ್ಳಿಯ ಜೆ ಎಸ್ ಎಸ್ ಪ್ರೌಡಶಾಲೆಯ ಆವರಣದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಇದಾಗಿದ್ದು
ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಯನ್ನು ಗುರುತಿಸಿ ಪೋಷಿಸುವ ಕಾರ್ಯವಾಗಿದೆ ಕ್ರೀಡಾಕೂಟದಲ್ಲಿ ಮೂಲ ಸೌಕರ್ಯವಾದ ತುರ್ತು ಚಿಕಿತ್ಸೆಗೆ ಅಂಬ್ಯುಲೈನ್ಸ್ , ವಾಹನ, ಶುದ್ದಕುಡಿಯುವನೀರಿನ ವ್ಯವಸ್ಥೆಯಿಲ್ಲ ಕ್ರೀಡಾಕೂಟ ನಡೆಯುತ್ತಿದೆ.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಬಿರು ಬಿಸಿನಲ್ಲಿ ವಿಶ್ರಾಂತಿಗಾಗಿ ಶಾಮಿಯಾನವು ಇಲ್ಲದೆ ನೆರಳಿಗಾಗಿ ದೂರದ ಮರಗಳನ್ನುಆಶ್ರಯಿಸಬೇಕಾದ ಅನಿವಾರ್ಯತೆ ಕಂಡುಬಂದಿದೆ.
ಕ್ರೀಡಕೂಟದಲ್ಲಿ ಕ್ರೀಡಾಪಟುಗಳಿಗೆ ಆಟವಾಡುವಾಗ ಗಾಯವಾದರೆ ತಕ್ಷಣದ ಚಿಕಿತ್ಸೆಗೆ ತುರ್ತು ಅಂಬ್ಯುಲೈನ್ಸ್ ಕೂಡ ಇಲ್ಲದೆ ಕ್ರೀಡಾಕೂಟವು ನಡೆಯುತ್ತಿದೆ ಇದು ಸರಿಯಾದ ಕ್ರೀಡಾ ಕೂಟ ವಲ್ಲ ಎಂದು ಸಾರ್ವಜನಿಕರು ದೂರಿದರು
ವರದಿ ಆರ್ ಉಮೇಶ್.