ಜನ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರ…. ಪುರುಷೋತ್ತಮ್
ದೊಡ್ಡಬಳ್ಳಾಪುರ!.. ಬಿ ಜೆ ಪಿ ಯ ಭ್ರಷ್ಟಾಚಾರದಿಂದ ಕಂಗೆಟ್ಟಿದ್ದ ರಾಜ್ಯದ ಜನತೆ ಬಿ ಜೆ ಪಿ ಯನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಂದು ಆಮ್ ಆದ್ಮಿ ಪಕ್ಷದ ಪರಿಶಿಷ್ಟ ಜಾತಿ ಪಂಗಡ ಘಟಕದ ನೂತನ ರಾಜ್ಯಾಧ್ಯಕ್ಷ ಪುರುಷೋತ್ತಮ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪುರುಷೋತ್ತಮ್ ಮಾತನಾಡಿ ಆಮ್ ಆದ್ಮಿ ಪಕ್ಷದ ಸರ್ಕಾರಗಳ ಜನಪ್ರಿಯ ಪ್ರಣಾಳಿಕೆಗಳನ್ನು ಕಾಫಿ ಮಾಡಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಬಾಗಷಃ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಭ್ರಷ್ಟಾಚಾರ ತಡೆಯುವಲ್ಲಿ ವಿಫಲರಾಗಿದ್ದಾರೆ. ಹಿಂದಿನ ಬಿ ಜೆ ಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿದ್ದ ರಾಜ್ಯದ ಜನತೆ ಕಾಂಗ್ರೆಸ್ಗೆ ಬಹುಮತ ಕೊಟ್ಟು ಅಧಿಕಾರಕ್ಕೆ ತಂದು ಈಗ ಭ್ರಮನಿರಸ ಗೊಂಡಿದ್ದಾರೆ. ಒಟ್ಟಾರೆ ಬಿ ಜೆ ಪಿ ಹಾಗು ಕಾಂಗ್ರೆಸ್ ಒಂದೇ ನಾಣ್ಯದ ಎರಡೂ ಮುಖಗಳು. ರಾಜ್ಯದಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಇದನ್ನು ನಮ್ಮ ಪಕ್ಷ ವಿರೋದಿಸುತ್ತದೆ. ಮುಂಬರುವ ಜಿ. ಪ, ತಾ. ಪಂ ಹಾಗು ಲೋಕಸಭಾ ಚುನಾವನೆಗಳಿಗೆ ಪಕ್ಷ ಈಗಾಗಲೇ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯ ಮಂತ್ರಿ ಚಂದ್ರು ರವರ ನೇತೃತ್ವದಲ್ಲಿ ಸಿದ್ಧತೆ ನಡೆಸುತ್ತಿದೆ. ಎಂದ ಪುರುಷೋತ್ತಮ ಸುದ್ಧಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಚಿತ್ರ ನಟ ಉಪೇಂದ್ರ ರವರ ಹೊಲಗೇರಿ ಹೇಳಿಕೆಯನ್ನು ನಾವು ತೀವ್ರವಾಗಿ ಕಂಡಿಸುತ್ತೇವೆ. ಉಪೇಂದ್ರ ಒಬ್ಬ ಜನಪ್ರಿಯ ನಾಯಕ ನಟ. ಆದರೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿದ್ದರೆ ಉತ್ತಮ. ಜನಪ್ರಿಯತೆಯ ಗುಂಗಿನಲ್ಲಿ ಶೋಷಿತ ವರ್ಗಗಳ ಬಗ್ಗೆ ಕೇವಲವಾಗಿ ಮಾತನಾಡುವುದನ್ನು ಯಾರು ಸಹಿಸುವುದಿಲ್ಲ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಬಿ. ಕೆ. ಶಿವಪ್ಪ ಮಾತನಾಡಿ ದೆಹಲಿ ಪಂಜಾಬ್ ನ ನಮ್ಮ ಸರ್ಕಾರಗಳ ಜನಪ್ರಿಯ ಯೋಜನೆಗಳನ್ನು ಕದ್ದು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಯೋಜನೆಗಳ ಜಾರಿ ನೆಪದಲ್ಲಿ ಹಾಗು ಗುತ್ತಿಗೆ ವಿಚಾರದಲ್ಲಿ ಬಾರಿ ಭ್ರಷ್ಟಾಚಾರ ನಡೆಸುತ್ತಿದೆ. ಹಿಂದಿನ ಬ್. ಜೆ. ಪಿ ಸರ್ಕಾರದ ಭ್ರಷ್ಟಾಚಾರ ವನ್ನು ಕಟುವಾಗಿ ಟೀಕಿಸುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದಲ್ಲಿ ಬಿ. ಜೆ. ಪಿ. ಯನ್ನು ಮೀರಿಸುತ್ತಿದೆ. ಇದು ಕೂಡಾ ಪರ್ಸೆಂಟೇಜ್ ಹಾದಿಯಲ್ಲೇ ನಡೆಯುತ್ತಿದೆ. ಇದು ಹೀಗೆ ಮುಂದುವರೆದರೆ ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯದಲ್ಲಿ ಜನಾಂದೋಲನ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶಿವಪ್ಪ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಕಾರ್ಯದರ್ಶಿ ಗಂಗಬೈರಪ್ಪ, ಜಿಲ್ಲಾಧ್ಯಕ್ಷ ನಂಜುಂಡಪ್ಪ, ಯುವ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುನಿಯಪ್ಪ ಮುಂತಾದವರು ಹಾಜರಿದ್ದರು.