ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ( Gruha Jyoti Scheme ) ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಲಬುರ್ಗಿಯಲ್ಲಿ ಆಗಸ್ಟ್.5ರಂದು ಚಾಲನೆ ನೀಡಲಿದ್ದಾರೆ. ಈ ಬಳಿಕ, ಜುಲೈ.27ರ ಒಳಗೆ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡವರಿಗೆ ಶೂನ್ಯ ಬಿಲ್ ಬರಲಿದೆ.

ಹೀಗೆ ಬರುವಂತ ವಿದ್ಯುತ್ ಬಿಲ್ ನಲ್ಲಿ ( Electricity Bill ) ಏನೆಲ್ಲಾ ಇರುತ್ತೆ ಅನ್ನೋ ಬಗ್ಗೆ ಮುಂದೆ ಓದಿ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪ್ರಯೋಜನ ಈ ತಿಂಗಳಿನಿಂದ ಆರಂಭಗೊಳ್ಳಲಿದೆ. ಅರ್ಹ ಫಲಾನುಭವಿಗಳಿಗೆ ಈ ತಿಂಗಳು ಶೂನ್ಯ ಬಿಲ್ ಮೊತ್ತವು ಗ್ರಾಹಕರಿಗೆ 200 ಯೂನಿಟ್ ಒಳಗೆ ಬಳಕೆ ಮಾಡಿದ್ದರೇ ಬರಲಿದೆ.

ಇದೀಗ ಶೂನ್ಯ ಬಿಲ್ ಮಾದರಿಯನ್ನು ರಾಜ್ಯ ಸರ್ಕಾರದಿಂದ ವಿದ್ಯುತ್ ಗ್ರಾಹಕರಿಗಾಗಿ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಈ ತಿಂಗಳ ಶೂನ್ಯ ಮೊತ್ತದ ಬಿಲ್ ನಲ್ಲಿ ಏನಿರುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಹೀಗಿದೆ ಶೂನ್ಯ ಮಾದರಿ ಬಿಲ್ ನಲ್ಲಿ ಇರುವಂತ ಮಾಹಿತಿ

ಎಸ್ಕಾಂಗಳ ಹೆಸರು, ಆರ್ ಆರ್ ಸಂಖ್ಯೆ ಮತ್ತು ವೈಯಕ್ತಿಕ ವಿವರಗಳು ಇರಲಿವೆ.
ಗೃಹ ಜ್ಯೋತಿಯ ಅರ್ಹತೆಯ ವಿವರ ಇರಲಿದೆ.
ಬಿಲ್ ಅವಧಿ ಮತ್ತು ಗ್ರಾಹಕರು ಬಳಸಿದಂತ ವಿದ್ಯುತ್ ಬಳಕೆಯ ವಿವರ ಇರಲಿದೆ.
ಸಹಾಯ ಧನಕ್ಕೆ ಅರ್ಹ ಯೂನಿಟ್ ಗಳು ಎಷ್ಟು ಎಂಬ ಮಾಹಿತಿಯನ್ನು ನೀಡಲಾಗುತ್ತದೆ.
ವಿದ್ಯುತ್ ಬಳಕೆಯ ಬಿಲ್ ಮೊತ್ತ ಆಗಸ್ಟ್ ತಿಂಗಳಿನಲ್ಲಿ ಎಷ್ಟು ಬಂದಿದೆ ಎನ್ನುವ ಮಾಹಿತಿಯನ್ನು ಒಳಗೊಂಡಿರಲಿದೆ.
ಅಂತಿಮವಾಗಿ ಗೃಹ ಜ್ಯೋತಿ ಸಹಾಯಧನದ ಮೊತ್ತ ಎಷ್ಟು ಎಂಬುದನ್ನು ನಮೂದಿಸಲಾಗಿರುತ್ತದೆ.

 

ಗೃಹ ಜ್ಯೋತಿ: ಜು.22ರೊಳೆಗೆ ಅಪ್ಲೈ ಮಾಡಿದವರಿಗೆ 200 ಯೂನಿಟ್ ಬಳಸಿದ್ರೆ ‘ಶೂನ್ಯ ಬಿಲ್’ – ಸಚಿವ ಕೆ.ಜೆ ಜಾರ್ಜ್

ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಆಗಸ್ಟ್ 05, 2023 ರಂದು ಬೆಳಿಗ್ಗೆ 11 ಗಂಟೆಗೆ ಎನ್.ವಿ ಮೈದಾನ ಕಲಬುರಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. 200 ಯೂನಿಟ್ ವಿದ್ಯುತ್ ಅನ್ನು ಜುಲೈ.22ರ ಒಳಗೆ ಬಳಕೆ ಮಾಡಿದವರಿಗೆ ಈ ತಿಂಗಳ ಬಿಲ್ ಶೂನ್ಯ ಬರಲಿದೆ. ಆದ್ರೇ 200 ಯೂನಿಟ್ ಗೂ ಹೆಚ್ಚು ಬಳಕೆ ಮಾಡಿದವರಿಗೆ ಈ ಯೋಜನೆಗೆ ಅರ್ಹರಾಗುವುದಿಲ್ಲ.

ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, “ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಉಪಸ್ಥಿತರಿರುವರು” ಎಂದು ತಿಳಿಸಿದರು.

ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಯನ್ನೆ ಧೈಯವಾಗಿಸಿಕೊಂಡಿರುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ ರಾಜ್ಯದ್ಯಂತ ಈವರೆಗೆ ಒಟ್ಟು 1.42 ಕೋಟಿಗೂ ಹೆಚ್ಚು ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ನಾಗರೀಕರಿಗೆ ಆರ್ಥಿಕವಾಗಿ ದೊಡ್ಡ ನೆರವಾಗಲಿದ್ದು, ಸಾಮಾಜಿಕ ಭದ್ರತೆಯನ್ನು ನೀಡಲಿದೆ ಎಂದರು.

200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ ಅರ್ಹತೆ ಮಿತಿಯಲ್ಲಿರುವ ಎಲ್ಲಾ ಫಲಾನುಭವಿಗಳಿಗೂ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ಜುಲೈ 27 ರೊಳಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯುತ್ತಾರೆ. ತದನಂತರ ಯೋಜನೆಗೆ ಅರ್ಜಿ ಸಲ್ಲಿಸಿದವರು ಮುಂಬರುವ ತಿಂಗಳುಗಳಲ್ಲಿ ಯೋಜನೆಯ ಲಾಭ ಪಡೆಯಲಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಲು ಯಾವುದೇ ಕಡೆ ದಿನಾಂಕ ಇರುವುದಿಲ್ಲ ಎಂದು ತಿಳಿಸಿದರು.

ಗ್ರಹ ಜ್ಯೋತಿ ಯೋಜನೆಯಡಿಯಲ್ಲಿ ಹಿಂದಿನ ವರ್ಷದ ವಾರ್ಷಿಕ ಬಳಕೆಯ ತಿಂಗಳ ಸರಾಸರಿಯ ಜೊತೆಗೆ ಶೇ.10 ರಷ್ಟು ಹೆಚ್ಚಳ ಯೂನಿಟ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಗೃಹ ವಿದ್ಯುತ್ ಬಳಕೆದಾರರಿಗೆ ಈ ಯೋಜನೆ ತಲುಪಲಿದ್ದು ಆಗಸ್ಟ್ 1 ರಿಂದ ಅಂದರೆ ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆಗೆ ಈ ಯೋಜನೆ ಅನ್ವಯವಾಗಲಿದೆ. ಅರ್ಹತೆ ಮಿತಿಯಲ್ಲಿರುವ ಎಲ್ಲಾ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ ಎಂದರು.

ಈಗಾಗಲೇ ಜಾರಿಯಲ್ಲಿದ್ದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯನ್ನು ಗ್ರಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಕುಟುಂಬದವರಿಗೆ 40 ಯೂನಿಟ್ ಯಿಂದ 53 ಯೂನಿಟ್ ಹಾಗೂ ಶೇ.10 ರಷ್ಟು ಹೆಚ್ಚುವರಿ ಉಚಿತ ವಿದ್ಯುತ್, ಅಮೃತ ಜ್ಯೋತಿಗೆ 75 ಯೂನಿಟ್ ಜತೆಗೆ ಶೇ.10 ರಷ್ಟು ಹೆಚ್ಚಿಸುವುದರ ಮೂಲಕ ಎಲ್ಲರನ್ನು ಗೃಹ ಜ್ಯೋತಿ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದರು.