ಜಿಲ್ಲಾ ಮಟ್ಟದ ಸ್ವತಂತ್ರ ದಿನಾಚರಣೆಯನ್ನು ದೊಡ್ಡಬಳ್ಳಾಪುರದಲ್ಲಿ ಆಚರಿಸುವಂತೆ ಕರವೇ ಮನವಿ
ಜಿಲ್ಲಾ ಮಟ್ಟದ ಸ್ವತಂತ್ರ ದಿನಾಚರಣೆಯನ್ನು ದೊಡ್ಡಬಳ್ಳಾಪುರದಲ್ಲಿ ಆಚರಿಸುವಂತೆ ಕರವೇ ಮನವಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ:ಈ ಬಾರಿಯ ಜಿಲ್ಲಾ ಮಟ್ಟದ ಸ್ವತಂತ್ರ ದಿನಾಚರಣೆಯನ್ನು ದೊಡ್ಡಬಳ್ಳಾಪುರದಲ್ಲಿ ಆಚರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

ಹೆಬ್ಬಾಳದಲ್ಲಿರುವ ಸಚಿವ ಕೆಎಚ್.ಮುನಿಯಪ್ಪ ಅವರ ಮನೆಗೆ ತೆರಳಿದ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಅವರ ತಂಡ 1969 ರಿಂದಲೂ ಉಪವಿಭಾಗವಾಗಿರುವ ಹಾಗೂ ಎಲ್ಲಾ ಮಾನದಂಡಗಳ ಪ್ರಕಾರ ಜಿಲ್ಲಾ ಕೇಂದ್ರವಾಗುವ ಅರ್ಹತೆ ಇದ್ದರು ಸಹ ನಮ್ಮ ತಾಲೂಕನ್ನು ಕಡೆಗಣಿಸಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ದೇವನಹಳ್ಳಿಯಲ್ಲಿ ನಡೆಸುತ್ತಿರುಯವುದು ಅವೈಜ್ಞಾನಿಕವಾಗಿದೆ ಹಾಗೂ ದೇವನಹಳ್ಳಿಯನ್ನು ಅನಧಿಕೃತವಾಗಿ ಜಿಲ್ಲಾ ಕೇಂದ್ರ ಎಂದು ಬಿಂಬಿಸುವಂತಾಗಿದೆ.

ಈ ಕಾರಣದಿಂದ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಗಳಿದ್ದರು ನಮ್ಮ ದೊಡ್ಡಬಳ್ಳಾಪುರ ತಾಲೂಕು ನ್ಯಾಯಯುತವಾಗಿ ಸಿಗಬೇಕಾದ ಅವಕಾಶಗಳಿಂದ ವಂಚಿತವಾಗುತ್ತಿದೆ ಆದಕಾರಣ ಈ ಭಾರಿಯ ಸ್ವತಂತ್ರ ದಿನಾಚರಣೆಯನ್ನು ನಿಮ್ಮ ನೇತೃತ್ವದಲ್ಲಿ ನಮ್ಮ ತಾಲೂಕಿನಲ್ಲಿ ನಡೆಸಬೇಕೇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್ಎಲ್ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ತಾಲ್ಲೂಕು ಖಜಾಂಚಿ ಆನಂದ್, ಕಾರ್ಯದರ್ಶಿ ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ನಗರ ಕಾರ್ಯದರ್ಶಿ ರಘುನಂದನ್, ಕಸಬಾ ಹೋಬಳಿ ಅಧ್ಯಕ್ಷ ಕೋಡಿಹಳ್ಳಿ ಬಾಬು ಕಾಂಗ್ರೆಸ್ ಮುಖಂಡ ರಾಮಕೃಷ್ಣ ಉಪಸ್ಥಿತರಿದ್ದರು.