ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್‌ನ ನೂತನ ಅದ್ಯಕ್ಷರಾಗಿ ಸಿ.ಎನ್ ರಾಜಶೇಖರ್ ಆಯ್ಕೆ ನಗರದಲ್ಲಿ ಗಡಿಯಾರ ಸ್ತಂಭ ನಿರ್ಮಾಣಕ್ಕೆ ನಿರ್ದಾರ.

ಲಯನ್ಸ್ ಕ್ಲಬ್ ನ ಸುವರ್ಣ ಸಂಭ್ರಮ ಪ್ರಯುಕ್ತ ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಯಲ್ಲಿ ಶಾಶ್ವತವಾಗಿ ಉಳಿಯುವಂತಾ ಕಾರ್ಯಕ್ಕೆ ಮುಂದಾಗಿದ್ದು ನಗರದ ಟಿ ಬಿ ಸರ್ಕಲ್ ಬಳಿ ಗಡಿಯಾರ ಸ್ತಂಭ ನಿರ್ಮಾಣ ಮಾಡಲಿದ್ದೇವೆ ಎಂದು ನೂತನ‌ ಸಾಲಿಗೆ ಆಯ್ಕೆ ಯಾದ ಅದ್ಯಕ್ಷ ಸಿ ಎನ್ ರಾಜಶೇಖರ್ ತಿಳಿಸಿದರು

ನಗರದ ಬಾಶೆಟ್ಟಿಹಳ್ಳಿ ಸಮೀಪದ ಅನ್ನಪೂರ್ಣ ಪಾರ್ಟಿ ಹಾಲ್ ನಲ್ಲಿ ನೆಡೆದ ಲಯನ್ಸ್ ಕ್ಲಬ್ ನ 2023/2024 ನೇ ಸಾಲಿನ ಪದಾಧಿಕಾರಿಗಳ ಪದಗ್ರಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಗಡಿಯಾರ ಸ್ತಂಭದ ಜೊತೆಗೆ ತಾಲ್ಲೂಕಿನ ಜನತೆಗೆ ಉಪಯುಕ್ತವಾಗುವಂತೆ ರಕ್ತದಾನ ಬ್ಯಾಂಕ್,ಕಣ್ಣಿನ ಆಪರೇಷನ್ ಥಿಯೇಟರ್‌ ಸಹ ಸ್ಥಾಪನೆ ಮಾಡಲಿದ್ದೇವೆ ಎಂದರು.

ಕಳೆದ 50 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಶೈಕ್ಷಣಿಕ ಶಿಬಿರ ಆರೋಗ್ಯ ಶಿಬಿರ ಉಚಿತ ಕಂಪ್ಯೂಟರ್ ಶಿಕ್ಷಣ ಇನ್ನು ಅನೇಕ ಸೇವೆಗಳನ್ನು ಮುಂದುವರಿಸಲಾಗುವುದು ಎಂದರು.
ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಅದ್ಯಕ್ಷ ಎಸ್ ಪ್ರಕಾಶ್,ಕಾರ್ಯದರ್ಶಿ ರಮಾಕಾಂತ್ ,ಆರ್ ಎಸ್ ಮಂಜುನಾಥ್,ಹುಲಿಕಲ್ ನಟರಾಜು ಸೇರಿದಂತೆ 18 ಮಂದಿ ನಿರ್ದೇಶಕರುಗಳು ಹಾಜರಿದ್ದರು.